ಜಗತ್ತಿನ ಶಕ್ತಿಶಾಲಿ ಪಾಸ್​ಪೋರ್ಟ್​ ಪಟ್ಟಿ ಬಿಡುಗಡೆ: ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?

masthmagaa.com:

2021ನೇ ಸಾಲಿನ ವಿಶ್ವದ ಹೆಚ್ಚು ಶಕ್ತಿಶಾಲಿ ಪಾಸ್​​ಪೋರ್ಟ್​​​ ಹೊಂದಿರೋ ದೇಶಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದ್ರಲ್ಲಿ ಜಪಾನ್ ಮೊದಲ ಸ್ಥಾನ ಪಡೆದುಕೊಂಡಿದ್ದು, ಸಿಂಗಾಪುರ್​ 2ನೇ ಸ್ಥಾನ ಪಡೆದುಕೊಂಡಿದೆ. ಜರ್ಮನಿ ಮತ್ತು ದಕ್ಷಿಣ ಕೊರಿಯಾ 3ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿವೆ. ಹೆನಲ್ ಪಾಸ್​ಪೋರ್ಟ್ ಇಂಡೆಕ್ಸ್​ ಪ್ರಕಾರ ಜಪಾನ್ ಪಾಸ್​ಪೋರ್ಟ್​ ಹೊಂದಿರೋರಿಗೆ 193 ದೇಶಗಳಲ್ಲಿ ಫ್ರೀ ವೀಸಾ ಅಥವಾ ವೀಸಾ ಆನ್ ಅರೈವಲ್ ಇದೆ. 2ನೇ ಸ್ಥಾನದಲ್ಲಿರೋ ಸಿಂಗಾಪುರ್​​​ ಪಾಸ್​ಪೋರ್ಟ್​ ಇರೋರಿಗೆ 192 ದೇಶಗಳಲ್ಲಿ ಫ್ರೀ ವೀಸಾ ಅಥವಾ ವೀಸಾ ಆನ್ ಅರೈವಲ್ ಇದೆ. ಅದೇ 3ನೇ ಸ್ಥಾನದಲ್ಲಿರೋ ಸೌತ್ ಕೊರಿಯಾ ಮತ್ತು ಜರ್ಮನಿ ಪಾಸ್​ಪೋರ್ಟ್​ ಹೊಂದಿರೋರಿಗೆ 191 ದೇಶಗಳಲ್ಲಿ ಈ ಸೌಲಭ್ಯ ಇದೆ. ಕೊರೊನಾ ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕಿದ್ರು ಕೂಡ ಅಮೆರಿಕ ಮತ್ತು ಯುನೈಟೆಡ್ ಕಿಂಗ್​ಡಮ್ 7ನೇ ಸ್ಥಾನದಲ್ಲಿವೆ. ಇನ್ನುಳಿದಂತೆ ಯುಎಇ ಮತ್ತು ಚೀನಾ ಕೂಡ ಈ ಪಟ್ಟಿಯಲ್ಲಿ ಹಂತ ಹಂತವಾಗಿ ಮೇಲೆ ಬರ್ತಿರೋದು ಕಾಣಿಸ್ತಾ ಇದೆ. 2011ರಲ್ಲಿ 90ನೇ ಸ್ಥಾನದಲ್ಲಿದ್ದ ಚೀನಾ ಈಗ 68ನೇ ಸ್ಥಾನಕ್ಕೆ ಬಂದಿದೆ. ಅದೇ ಯುಎಇ 65ನೇ ಸ್ಥಾನದಿಂದ 15ನೇ ಸ್ಥಾನಕ್ಕೆ ಜಂಪ್ ಆಗಿದೆ. ಯುಎಇ ಪಾಸ್​ಪೋರ್ಟ್​ ಹೊಂದಿರೋರು 174 ದೇಶಗಳಿಗೆ ಆರಾಮಾಗಿ ಪ್ರವೇಶ ಪಡೀತಾರೆ. ಅದೇ ಈ ಸಂಖ್ಯೆ ಒಂದು ದಶಕದ ಹಿಂದೆ 67ರಷ್ಟಿತ್ತು. ಇನ್ನು ನಮ್ಮ ಭಾರತದ ವಿಚಾರಕ್ಕೆ ಬಂದ್ರೆ ಕಳೆದ ವರ್ಷ 84ನೇ ಸ್ಥಾನ ಪಡೆದಿತ್ತು. ಆದ್ರೆ ಈ ಸಲ 6 ಸ್ಥಾನ ಕುಸಿದು 90ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಭಾರತೀಯರು 58 ದೇಶಗಳಿಗೆ ಮಾತ್ರವೇ ವೀಸಾ ಇಲ್ಲದೇ ಹೋಗಬಹುದು. ಇನ್ನು ಪಕ್ಕದ ಪಾಕಿಸ್ತಾನ ಈ ಪಟ್ಟಿಯಲ್ಲಿ ಲಾಸ್ಟ್​​​ನಿಂದ 4ನೇ ಸ್ಥಾನದಲ್ಲಿದ್ದು 32 ದೇಶಗಳಿಗೆ ಸುಲಭವಾಗಿ ಹೋಗೋ ಅವಕಾಶ ಹೊಂದಿದೆ. ಈ ಪಟ್ಟಿಯಲ್ಲಿ ಕೊನೆಯ ಅಂದ್ರೆ 116ನೇ ಪ್ಲೇಸ್​​ನಲ್ಲಿ ಅಫ್ಘಾನಿಸ್ತಾನ ಇದ್ದು, 26 ದೇಶಗಳಿಗೆ ವೀಸಾ ಇಲ್ಲದೆ ಹೋಗಲು ಅನುಮತಿ ಇದೆ.

-masthmagaa.com

Contact Us for Advertisement

Leave a Reply