ಕೊರೋನಾ ಲಸಿಕೆಯಲ್ಲಿ ಇಸ್ರೇಲ್​ ಸಂಶೋಧಕರಿಗೆ ಸಿಕ್ತು ಯಶಸ್ಸು..!

masthmagaa.com:

ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರೋ ಕೊರೋನಾ ವೈರಸ್​ ಚಿಕಿತ್ಸೆಯಲ್ಲಿ ಮೊದಲ ಯಶಸ್ಸು ಸಿಕ್ಕಿದೆ ಅಂತ ಇಸ್ರೇಲ್ ಹೇಳಿದೆ. ಈ ಬಗ್ಗೆ ಮಾತನಾಡಿರೋ ಇಸ್ರೇಲ್ ರಕ್ಷಣಾ ಸಚಿವ, ಕೊರೋನಾ ಕಾಯಿಲೆಗೆ ಅಭಿವೃದ್ಧಿಪಡಿಸಿರುವ ಲಸಿಕೆಯಲ್ಲಿ ನಮ್ಮ ಸಂಶೋಧಕರು ಮೊದಲ ಯಶಸ್ಸು ಸಾಧಿಸಿದ್ದಾರೆ ಅಂತ ಹೇಳಿದ್ದಾರೆ.

ಇಸ್ರೇಲ್ ಇನ್​​ಸ್ಟಿಟ್ಯೂಟ್ ಆಫ್ ಬಯೋಲಾಜಿಕಲ್ ರಿಸರ್ಚ್​ (ಐಐಬಿಆರ್) ಸಂಸ್ಥೆ ರೋಗ ನಿರೋಧಕ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಿದೆ. ಈ ಲಸಿಕೆಯಲ್ಲಿರುವ ಪ್ರೊಟೀನ್ ಅಂಶ ವೈರಾಣು ವಿರುದ್ಧ ಹೋರಾಡಲು ರೋಗ ನಿರೋಧಕ ವ್ಯವಸ್ಥೆಗೆ ಸಹಾಯ ಮಾಡುತ್ತದೆ. ಜೊತೆಗೆ ದೇಹದಲ್ಲಿರುವ ಕೊರೋನಾ ವೈರಾಣುವನ್ನು ಸಾಯಿಸುತ್ತದೆ ಎಂದಿದ್ದಾರೆ.

ಆದ್ರೆ ಈ ಲಸಿಕೆ ಯಾವಾಗ ಸಾರ್ವಜನಿಕ ಬಳಕೆಗೆ ಲಭ್ಯವಾಗುತ್ತದೆ ಅನ್ನೋದು ಇನ್ನೂ ಗೊತ್ತಾಗಿಲ್ಲ. ಅಲ್ಲದೆ ಪ್ರಾಣಿಗಳು ಅಥವಾ ಮನುಷ್ಯರ ಮೇಲೆ ಇದರ ಪ್ರಯೋಗ ನಡೆದಿದೆಯೇ ಅನ್ನೋದು ಕೂಡ ಗೊತ್ತಾಗಿಲ್ಲ.

ನೆದರ್ಲ್ಯಾಂಡ್​ನಲ್ಲೂ ಇಂಥದ್ದೇ ಲಸಿಕೆಯನ್ನು ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಅದು ವೈರಾಣುವನ್ನು ಕೊಲ್ಲಲು ಶಕ್ತವಾಗಿದೆ ಅಂತ ಸಂಶೋಧಕರು ಹೇಳಿದ್ದಾರೆ. ಜಗತ್ತಿನಾದ್ಯಂತ ಸುಮಾರು 100ಕ್ಕೂ ಹೆಚ್ಚು ಸಂಶೋಧಕರ ತಂಡಗಳು ಕೊರೋನಾಗೆ ಲಸಿಕೆ ಕಂಡುಹಿಡಿಯುತ್ತಿವೆ.

-masthmagaa.com

Contact Us for Advertisement

Leave a Reply