masthmagaa.com:

ಜಾರ್ಖಂಡ್​ನಲ್ಲಿ 5 ಮಕ್ಕಳ ತಾಯಿ ಮೇಲೆ 17 ಜನ ಗ್ಯಾಂಗ್​ ರೇಪ್ ಮಾಡಿದ ಪ್ರಕರಣ ದೇಶವ್ಯಾಪಿ ಚರ್ಚೆಯಾಗ್ತಿದೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗುವ ಕಾನೂನು ಜಾರಿಗೆ ಬರಬೇಕು ಅನ್ನೋ ಕೂಗು ಮತ್ತೆ ಕೇಳಿ ಬಂದಿದೆ. ಅತ್ಯಾಚಾರವನ್ನ ಪ್ರಚೋದಿಸುವ ವಿಚಾರಗಳನ್ನ ನಿಷೇಧಿಸದೇ ಅದನ್ನ ತಡೆಯಲು ಸಾಧ್ಯವಿಲ್ಲ ಅಂತ ಆರ್​ಜೆಡಿ ನಾಯಕ ಶಿವಾನಂದ ತಿವಾರಿ ಹೇಳಿದ್ದಾರೆ. ‘ಆದಿವಾಸಿ ಸಮಾಜದಲ್ಲೂ ಅತ್ಯಾಚಾರ ನಡೆಯುತ್ತೆ ಅನ್ನೋದನ್ನ ಯಾರೂ ಯೋಚಿಸಿರಲಿಲ್ಲ. ಅತ್ಯಾಚಾರ ಅನ್ನೋದು ಆದಿವಾಸಿ ಸಂಸ್ಕೃತಿಯಲ್ಲಿ ಯಾವತ್ತೂ ಇರಲೇ ಇಲ್ಲ. ಆದ್ರೆ ಆಧುನೀಕರಣದಿಂದಾಗಿ ಮಹಿಳೆಯನ್ನ ಉಪಭೋಗದ ಒಂದು ವಸ್ತು ರೀತಿ ನೋಡಲಾಗ್ತಿದೆ. ಆದಿವಾಸಿ ಸಮಾಜಕ್ಕೂ ಅತ್ಯಾಚಾರ ಕಾಲಿಟ್ಟಿದೆ ಅಂದ್ರೆ ಸಮಾಜದ ಕೊನೇ ಹಂತದವರೆಗೂ ಹೋಗಿದೆ ಅಂತ ಅರ್ಥ. ಸಿನಿಮಾಗಳಲ್ಲಿರುವ ಐಟಂ ಡಾನ್ಸ್, ಜಾಹೀರಾತುಗಳು, ಮೊಬೈಲ್​ ಫೋನ್​​ಗಳಲ್ಲಿ ಸಿಗುವ ಅಶ್ಲೀಲ ವಿಡಿಯೋಗಳು ಅತ್ಯಾಚಾರದ ಮಾನಸಿಕೆಯನ್ನ ತಯಾರು ಮಾಡುತ್ತೆ. ಅತ್ಯಾಚಾರದ ಮೈಂಡ್​ಸೆಟ್​ ರೆಡಿ ಮಾಡುವ ಇಂತಹ ವಿಚಾರಗಳನ್ನ ಮೊದಲು ನಿರ್ಬಂಧಿಸಬೇಕು. ಅದಾದ ಬಳಿಕವೇ ಅತ್ಯಾಚಾರದಂತಹ ಅಪರಾಧಗಳನ್ನ ತಡೆಯಬಹುದು. ಕಠಿಣ ಕಾನೂನುಗಳು ಇದ್ದರೂ ಅತ್ಯಾಚಾರ ನಿಂತಿಲ್ಲ. ಹೀಗಾಗಿ ಎಲ್ಲಿವರೆಗೆ ಅತ್ಯಾಚಾರವನ್ನ ಪ್ರಚೋದಿಸುವ ವಿಚಾರಗಳಿರುತ್ತವೇ ಅಲ್ಲಿವರೆಗೆ ಅತ್ಯಾಚಾರವನ್ನ ತಡೆಯಲು ಸಾಧ್ಯವಿಲ್ಲ’ ಅಂತ ಶಿವಾನಂದ ತಿವಾರಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply