ಜಮ್ಮು ಕಾಶ್ಮೀರದಲ್ಲಿ ಯೋಧರ ಮೇಲೆ ಉಗ್ರರ ದಾಳಿ

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಉಪಟಳ ನಿಲ್ಲುವ ಲಕ್ಷಣವೇ ಕಾಣುತ್ತಿಲ್ಲ. ಇಲ್ಲಿನ ಕುಲಗಾಂವ್​​​ನಲ್ಲಿರೋ ಸಿಆರ್​​ಪಿಎಫ್ ಯೋಧರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಸಿಆರ್​ಪಿಎಫ್ ಯೋಧ ಗಾಯಗೊಂಡಿದ್ದಾರೆ. ಇನ್ನು ಪ್ರದೇಶವನ್ನು ಸುತ್ತುವರಿದಿರುವ ಯೋಧರು ಉಗ್ರರ ಭೇಟೆಗೆ ಹುಡುಕಾಟ ಆರಂಭಿಸಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ವಾಪಸ್ ಪಡೆದ ಬಳಿಕ ಉಗ್ರರ ಕಿರಿಕ್ ಜೋರಾಗಿದೆ. ಅಲ್ಲದೆ ಯೋಧರು ಮತ್ತು ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡುತ್ತಿದ್ದಾರೆ. ಕಳೆದ ಮಂಗಳವಾರವಷ್ಟೇ ಯೋಧರು ತ್ರಾಲ್​​ನಲ್ಲಿ ಮೂವರು ಯೋಧರನ್ನು ಹೊಡೆದುರುಳಿಸಿದ್ದರು.

Contact Us for Advertisement

Leave a Reply