ಜ್ಯೂ.ಎನ್‌ಟಿಆರ್‌ಗೆ ಜಾನ್ಹವಿ ಕಪೂರ್‌ ನಾಯಕಿ

masthmagaa.com:

ಜಾನ್ಹವಿ ಕಪೂರ್‌ ಅವರು ತೆಲುಗಿನಲ್ಲಿ ನಟಿಸೋದು ಕನ್‌ಫರ್ಮ ಆಗಿದೆ. ಇವರ ಹುಟ್ಟು ಹಬ್ಬದ ದಿನದಂದೇ ಅವರು ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಹಿಂದಿಯ “ಧಡಕ್‌” ಚಿತ್ರದ ಮೂಲಕ ಬಾಲಿವುಡ್‌ ಗೆ ಎಂಟ್ರಿ ಕೊಟ್ಟಿದ್ದ ಜಾನ್ಹವಿ ಕಪೂರ್‌, ಹಿಂದಿಯ ಮಿಲಿ, ಗುಡ್‌ ಲಕ್‌ ಜೆರಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ರು. ಆದರೆ ಶ್ರೀದೇವಿ ಅವರಿಗೆ ಸಿಕ್ಕಷ್ಟು ಯಶಸ್ಸು ಜಾನ್ಹವಿಗೆ ಸಿಕ್ಕಿಲ್ಲ. ಆದರು ಛಲ ಬಿಡದ ಜಾನ್ಹವಿ ಇವಾಗ ತೆಲುಗಿಗೆ ಮುಖ ಮಾಡಿದ್ದಾರೆ. ಕಳೆದ ಸುಮಾರು ತಿಂಗಳುಗಳಿಂದ ಇವರು ಜ್ಯೂ. ಎನ್‌ಟಿಆರ್‌ ಜೊತೆ ಮೂವಿ ಮಾಡ್ತಾರೆ ಅನ್ನೊ ಗಾಳಿಸುದ್ದಿ ಹಬ್ಬಿತ್ತು. ಆದರೆ ಜಾನ್ಹವಿ ಇದರ ಬಗ್ಗೆ ಸ್ಪಷ್ಟನೆ ಕೊಟ್ಟಿರಲಿಲ್ಲ. ಇದೀಗ ಜಾನ್ಹವಿ ಹುಟ್ಟುಹಬ್ಬದ ದಿನವೇ ತೆಲುಗಿನ ಮೊದಲ ಮೂವಿಯ ಪೋಸ್ಟರ್‌ನ್ನು ಶೇರ್‌ ಮಾಡಿ ಗಾಳಿ ಸುದ್ದಿಯನ್ನ ನಿಜ ಮಾಡಿದ್ದಾರೆ. ಎನ್‌ಟಿಆರ್‌ 30 “ಕೊರಟಲ ಶಿವ” ಅವರು ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಜ್ಯೂ. ಎನ್‌ಟಿಆರ್‌ ಹಾಗೂ ಜಾನ್ಹವಿ ಕಪೂರ್‌ ನಾಯಕ, ನಾಯಕಿಯಾಗಿ ಅಭಿನಯಿಸಲಿದ್ದಾರೆ. ತನ್ನ ಹುಟ್ಟು ಹಬ್ಬದ ದಿನವೇ ಜಾನ್ಹವಿ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟರ್‌ನ್ನು ಶೇರ್‌ ಮಾಡಿಕೊಂಡಿದ್ದಾರೆ. ಜ್ಯೂ.ಎನ್‌ಟಿಆರ್‌ ಮತ್ತು ಜಾನ್ಹವಿ ಪೇರ್‌ ನೋಡಲು ಜನ ಕಾಯ್ತಾ ಇದಾರೆ. ಇನ್ನು ತಮ್ಮ 26ನೇ ವರ್ಷದ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ, ಸೆಲಿಬ್ರಿಟಿಗಳಿಂದ, ಸ್ನೇಹಿತರಿಂದ ಜಾನ್ಹವಿಗೆ ಶುಭಾಷಯಗಳ ಸುರಿಮಳೆ ಬರ್ತಾ ಇದೆ.

-masthmagaa.com

Contact Us for Advertisement

Leave a Reply