ಮುಸ್ಲಿಮರ ಕುರಾನ್​​​ನಲ್ಲೂ ಯೇಸು, ಮೇರಿ ಹೆಸರು..!

ಡಿಸೆಂಬರ್ 25ರಂದು ಪಾಶ್ಚಿಮಾತ್ಯ ದೇಶಗಳಲ್ಲಿ ವಾಸಿಸುವ ಜನರಿಗೆ ವಿಶೇಷ ದಿನವಾಗಿದೆ. ಕ್ರಿಶ್ಚಿಯನ್ ಧರ್ಮದ ಜನರು ಇದನ್ನು ಯೇಸುವಿನ ಜನ್ಮದಿನವೆಂದು ಆಚರಿಸುತ್ತಾರೆ. ಇನ್ನೊಂದು ವಿಚಾರ ಅಂದ್ರೆ ಕುರಾನ್‌ನಲ್ಲಿ ಪ್ರವಾದಿಗಿಂತ ಯೇಸುವಿನ ಹೆಸರು ಹೆಚ್ಚಾಗಿದೆಯಾದ್ರೂ ಮುಸ್ಲಿಮರು ಈ ಹಬ್ಬವನ್ನು ಆಚರಿಸೋದಿಲ್ಲ. ಈ ಹಬ್ಬಕ್ಕೆ ಬೇರೆ ಯಾವುದೇ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಮುಸ್ಲಿಂ ಸಮುದಾಯದ ಜನರು ಕೂಡ ಕ್ರಿಸ್‌ಮಸ್ ಆಚರಿಸುವುದಿಲ್ಲ. ಆದ್ರೂ ಯೇಸುವಿನಲ್ಲಿ ಅವನ ನಂಬಿಕೆ ಸ್ಪಷ್ಟವಾಗಿ ಗೋಚರಿಸುತ್ತದೆ.

ಮುಸ್ಲಿಂ ಸಮುದಾಯದಲ್ಲಿ, ಯೇಸುವನ್ನು ಕ್ರಿಶ್ಚಿಯನ್ ಧರ್ಮದ ಪ್ರವಾದಿ ಎಂದೇ ಪರಿಗಣಿಸಲಾಗುತ್ತದೆ. ಕುರಾನ್‌ನಲ್ಲಿ ಯೇಸು ಮತ್ತು ಮೇರಿಯ ಹೆಸರನ್ನು ಸಹ ಉಲ್ಲೇಖಿಸಲಾಗಿದೆ. ಇದರ ಹೊರತಾಗಿಯೂ, ಈದ್ ಹಬ್ಬ ಮತ್ತು ಕ್ರಿಸ್‌ಮಸ್ ಹಬ್ಬದ ನಡುವೆ ದೊಡ್ಡ ವ್ಯತ್ಯಾಸವಿದೆ.

ಯೇಸುವನ್ನು ಅರೇಬಿಕ್ ಭಾಷೆಯಲ್ಲೂ ಜೀಸಸ್ ಎಂದೇ ಕರೆಯಲಾಗುತ್ತದೆ. ಇಂದಿಗೂ, ಮುಸ್ಲಿಂ ಕುಟುಂಬಗಳಲ್ಲಿ, ಹುಡುಗರಿಗೆ ಇಸಾ ಎಂದು ಹೆಸರಿಡಲಾಗುತ್ತೆ. ಈ ಹೆಸರನ್ನು ಕುರಾನ್‌ನಲ್ಲಿ ಹಲವು ಬಾರಿ ಉಲ್ಲೇಖಿಸಲಾಗಿದೆ.

ಕುರಾನ್‌ನಲ್ಲಿ ಒಬ್ಬ ಮಹಿಳೆಯ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿದೆ. ಆ ಮಹಿಳೆ ಯೇಸುವಿನ ತಾಯಿ ಮೇರಿ ಅನ್ನೋದು ಆಶ್ಚರ್ಯಕರ ವಿಚಾರವಾಗಿದೆ. ಕನ್ಯಾ ಮೇರಿಯನ್ನು ಅರೇಬಿಕ್ ಭಾಷೆಯಲ್ಲಿ ಮರಿಯಮ್ ಎಂದೂ ಸಹ ಕರೆಯುತ್ತಾರೆ.

ಮರಿಯಮ್ ಹೆಸರಿನಲ್ಲಿ ಕುರಾನ್‌ನಲ್ಲಿ ಸಂಪೂರ್ಣ ಅಧ್ಯಾಯವೇ ಇದೆ. ಅದರಲ್ಲಿ ಯೇಸುಕ್ರಿಸ್ತನ ಜನನದ ಕಥೆಯನ್ನು ಹೇಳಲಾಗುತ್ತೆ. ಅನೇಕ ಮುಸ್ಲಿಂ ಕುಟುಂಬಗಳಲ್ಲಿ, ಹುಡುಗಿಯರ ಹೆಸರನ್ನು ಸಹ ಮರಿಯಮ್ ಎಂದು ಇಡಲಾಗಿದೆ.

ಆದ್ರೆ ಮುಹಮ್ಮದ್ ಅಥವಾ ಇಸ್ಲಾಂ ಪದವನ್ನು ಬೈಬಲ್​​​ನಲ್ಲಿ ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ಮುಸ್ಲಿಮರು ಈ ಹಬ್ಬವನ್ನು ಆಚರಿಸದೇ ಇದ್ದರೂ ಕೂಡ, ಕ್ರಿಶ್ಚಿಯನ್ನರಿಗೆ ಹಬ್ಬದ ಶುಭಾಶಯ ಕೋರುತ್ತಾರೆ. ಮತ್ತು ಅವಕಾಶ ಸಿಕ್ಕಾಗ ಆಚರಣೆಯಲ್ಲಿ ಭಾಗವಹಿಸುತ್ತಾರೆ.

Contact Us for Advertisement

Leave a Reply