ಕನ್ಹಯ್ಯ ಕುಮಾರ್ ಕಾರ್ಯಕ್ರಮ ಕೊನೆಯ ಕ್ಷಣದಲ್ಲಿ ರದ್ದು..!

ಕಲಬುರಗಿ: ಜೆಎನ್​ಯುನಲ್ಲಿ ದೇಶದ್ರೋಹದ ಘೋಷಣೆ ಕೂಗಿದ್ದ ಪ್ರಕರಣದ ಆರೋಪಿ, ಜೆಎನ್​​​ಯು ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷ  ಕನ್ಹಯ್ಯ ಕುಮಾರ್ ಉಪನ್ಯಾಯ ಕಾರ್ಯಕ್ರಮವನ್ನು ಕೊನೆಯ ಕ್ಷಣದಲ್ಲಿ ರದ್ದುಪಡಿಸಲಾಗಿದೆ.  ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ವಿಶೇಷ ಉಪನ್ಯಾಯ ಕಾರ್ಯಕ್ರಮ ನಡೆಯಬೇಕಿತ್ತು. ಅದಕ್ಕೆ ಕನ್ಹಯ್ಯ ಕುಮಾರ್ ಅವರಿಗೂ ಅವಕಾಶ ನೀಡಲಾಗಿತ್ತು. ಆದ್ರೆ ರಾಜ್ಯಪಾಲರ ನಿರ್ದೇಶನ ಮೇರೆಗೆ ಕನ್ಹಯ್ಯಾ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಡಾ.ಬಿ.ಆರ್‌.ಅಂಬೇಡ್ಕರ್‌ ಕಂಡ ಅಧುನಿಕ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ವಿಷಯವಾಗಿ ಕನ್ಹಯ್ಯ  ಉಪನ್ಯಾಸ ನೀಡಬೇಕಿತ್ತು. ಆದ್ರೆ ಕಾರ್ಯಕ್ರಮ ರದ್ದುಗೊಳಿಸಿ ಗುಲ್ಬರ್ಗಾ ವಿವಿಯ ಹಂಗಾಮಿ ಕುಲಪತಿ ಪರಿಮಳಾ ಅಂಬೇಕರ್ ಆದೇಶಿಸಿದ್ದಾರೆ.

ಈಗ ಕಾರ್ಯಕ್ರಮ ರದ್ದಾಗಿದ್ದರು ಕೂಡ, ಇದನ್ನು ಆಯೋಜಿಸಿದ್ದ, ಡಾ.ಬಿ.ಆರ್‌.ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ, ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟ ಬೇರೆ ಸ್ಥಳದಲ್ಲಿ ಕಾರ್ಯಕ್ರಮ ನಡೆಸಲು ಮುಂದಾಗಿದೆ.

Contact Us for Advertisement

Leave a Reply