ಸ್ಯಾಂಡಲ್​ವುಡ್​ ನಟಿ ಆತ್ಮಹತ್ಯೆ ಯತ್ನ.. ಕಾರಣ ಏನು ಗೊತ್ತಾ..?

masthmagaa.com:

ಬಿಗ್​ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಅಂತ ಅವರ ಆಪ್ತ ಮೂಲಗಳು ತಿಳಿಸಿವೆ. ಈ ಬಗ್ಗೆ ಫೇಸ್​ಬುಕ್​ನಲ್ಲಿ ಬರೆದುಕೊಂಡಿರೋ ಅವರು ‘ಈ ಕೆಟ್ಟ ಜಗತ್ತು ಮತ್ತು ಡಿಪ್ರೆಶನ್​ಗೆ ವಿದಾಯ’ ಅಂತ ಪೋಸ್ಟ್ ಮಾಡಿದ್ದಾರೆ. ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಕೌಟುಂಬಿಕ ಕಲಹಗಳಿಂದ ಬೇಸತ್ತಿದ್ರು ಅಂತ ಹೇಳಲಾಗ್ತಿದೆ.

ಈ ಬಗ್ಗೆ ಮಾತನಾಡಿರೋ ಅವರ ಸ್ನೇಹಿತೆ ನಟಿ ಅಶ್ವಿತಿ, ‘ಜಯಶ್ರೀ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಕೊರೋನಾ ಬಿಕ್ಕಟ್ಟಿನ ನಂತರ ಅವಕಾಶಗಳು ಕೂಡ ಕಮ್ಮಿಯಾಗಿದ್ದವು. ಇವತ್ತು ಬೆಳಗ್ಗೆ ಫೇಸ್​ಬುಕ್ ಪೋಸ್ಟ್ ನೋಡಿದಾಗ ನನಗೆ ಶಾಕ್ ಆಯ್ತು. ಸದ್ಯ ಅವರು ಆಸ್ಪತ್ರೆಯಲ್ಲಿದ್ದು, ಸುರಕ್ಷಿತವಾಗಿದ್ದಾರೆ. ಬೇಗ ಗುಣಮುಖರಾಗಿ ಬರಲಿ ಅಂತ ಪ್ರಾರ್ಥಿಸೋಣ’ ಎಂದಿದ್ದಾರೆ.

ಕಳೆದ ತಿಂಗಳು ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈನ​ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಕೂಡ ಡಿಪ್ರೆಶನ್​ಗೆ ಒಳಗಾಗಿದ್ದರು ಅಂತ ಹೇಳಲಾಗಿತ್ತು. ಕೊರೋನಾ ಬಿಕ್ಕಟ್ಟು ಮತ್ತು ಲಾಕ್​ಡೌನ್​ ಬಳಿಕ ನಟ, ನಟಿಯರಿಗೆ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಗಿವೆ. ಥಿಯೇಟರ್​ಗಳು ಬಂದ್ ಆಗಿ ಮೂರ್ನಾಲ್ಕು ತಿಂಗಳುಗಳೇ ಕಳೆದಿವೆ.

-masthmagaa.com

Contact Us for Advertisement

Leave a Reply