ಕರ್ನಾಟಕದಲ್ಲಿ ಕೊರೋನ ಸ್ಫೋಟ! ಆದ್ರೆ ದೇಶದಲ್ಲಿ ಚೂರು ಕಮ್ಮಿ

masthmagaa.com:

ದೇಶದಲ್ಲಿ ಕೊರೋನಾ ಪ್ರಕರಣ ನಿರಂತರ ಎರಡನೇ ದಿನ ಇಳಿಕೆ ಕಂಡಿದೆ. ಇವತ್ತು 2.38 ಲಕ್ಷ ಜನರಿಗೆ ಸೋಂಕು ದೃಢಪಟ್ಟಿದೆ. ಇದು ನಿನ್ನೆಗಿಂತ 20 ಸಾವಿರ ಕಮ್ಮಿ. 310 ಜನ ಸೋಂಕಿತರು ಮೃತಪಟ್ಟಿದ್ದಾರೆ. ದೇಶದಲ್ಲಿ ಕೊರೋನಾ ನಂಬರ್ಸ್ ಸ್ವಲ್ಪ ಕಮ್ಮಿಯಾದ್ರೂ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗಿದೆ. ಇವತ್ತೊಂದೇ ದಿನ 41,457 ಕೇಸ್​ ದೃಢಪಟ್ಟಿದೆ. 20 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ 22 ಪರ್ಸೆಂಟ್​ ಇದೆ. ಇನ್ನು ವಿವಿಧ ರಾಜ್ಯಗಳಲ್ಲಿ ಕೊರೋನಾ ಕೇಸಸ್​ ಕಮ್ಮಿ ವರದಿಯಾಗ್ತಿರೋ ಬೆನ್ನಲ್ಲೇ ತಕ್ಷಣದಿಂದಲೇ ಕೊರೋನಾ ಟೆಸ್ಟಿಂಗ್​ ಅನ್ನ ಹೆಚ್ಚಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಪಾಸಿಟಿವಿಟಿ ದರ ಹೆಚ್ಚಿರೋ ಹಿನ್ನೆಲೆ ರಾಜ್ಯ ಸರ್ಕಾರಗಳು ಕೊರೋನಾ ಪರೀಕ್ಷೆಗಳನ್ನ ಕಮ್ಮಿ ಮಾಡ್ತಿವೆ ಅನ್ನೋದನ್ನ ಗಮನಿಸಿ ಈ ರೀತಿ ಹೇಳಿದೆ.

-masthmagaa.com

Contact Us for Advertisement

Leave a Reply