ಸಿಎಂ ಪುತ್ರನ ವಿರುದ್ಧ ಹೆಚ್.ವಿಶ್ವನಾಥ್ ಭ್ರಷ್ಟಾಚಾರ ಆರೋಪ!

masthmagaa.com:

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇವತ್ತು 10ಕ್ಕೂ ಹೆಚ್ಚು ಬಿಜೆಪಿ ಶಾಸಕರು ಮತ್ತು ಸಚಿವರನ್ನು ಭೇಟಿಯಾಗಿ ನಾಯಕತ್ವದ ಕುರಿತು ಚರ್ಚಿಸಿದ್ದಾರೆ. ಈ ವೇಳೆ ಸಚಿವ ಯೋಗೇಶ್ವರ್​​, ಹೆಚ್​.ವಿಶ್ವನಾಥ್ ಸೇರಿದಂತೆ ಹಲವರು ಗಂಭೀರ ಆರೋಪ ಮಾಡಿದ್ದಾರೆ. ಮೊದಲಿಗೆ ಸಿ.ಪಿ ಯೋಗೇಶ್ವರ್​​​, ರಾಜ್ಯದಲ್ಲಿ ಸಿಎಂ ಬದಲು ಅವರ ಪುತ್ರ ವಿಜಯೇಂದ್ರ ಆಡಳಿತ ನಡೆಸ್ತಿದ್ದಾರೆ. ಇಲಾಖೆಗಳಲ್ಲಿ ಹಸ್ತಕ್ಷೇಪ ನಡೀತಾ ಇದೆ ಅಂತ ಆರೋಪಿಸಿದ್ದಾರೆ. ಮತ್ತೊಂದ್ಕಡೆ ಅರುಣ್ ಸಿಂಗ್ ಭೇಟಿ ಬಳಿಕ ಮಾತನಾಡಿದ ಹೆಚ್​.ವಿಶ್ವನಾಥ್ ಅಂತೂ ಸಿಎಂ ಪುತ್ರ ವಿಯಜೇಂದ್ರ ವಿರುದ್ಧ ದೊಡ್ಡ ಮೊತ್ತದ ಭ್ರಷ್ಟಾಚಾರದ ಆರೋಪ ಮಾಡಿದ್ಧಾರೆ. ವಿಜಯೇಂದ್ರ ಮತ್ತು ಅವರ ಗೆಳೆಯರು ದುಡ್ಡು ಕಲೆಕ್ಟ್ ಮಾಡಿ ದೆಹಲಿಗೆ ಕಳುಹಿಸ್ತಿದ್ದೀವಿ ಅಂತಿದ್ಧಾರೆ. ನೀರಾವರಿ ಯೋಜನೆಯ 20 ಸಾವಿರ ಕೋಟಿಯ ಟೆಂಡರ್​ ಯಾವುದೇ ಕ್ಲಿಯರೆನ್ಸ್ ಪಡೆಯದೇ ನೀಡಲಾಗಿದೆ. ಈ ಬಗ್ಗೆ ನಾನು ಅರುಣ್ ಸಿಂಗ್ ಅವರಿಗೂ ಮಾಹಿತಿ ನೀಡಿದ್ದೀನಿ ಅಂದ್ರು. ಇನ್ನು ಈ ಬಗ್ಗೆ ಮಾತನಾಡಿದ ಸಚಿವ ಶ್ರೀರಾಮುಲು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉರುಳಿಸೋಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಯತ್ನಿಸ್ತಿದ್ದಾರೆ. ಆದ್ರೆ ಕಾಂಗ್ರೆಸ್​ನಲ್ಲಿ ಅವರ ಹಿಂದೆಯೇ ಒಬ್ಬರು ಕಟ್ಟಪ್ಪ ಇದ್ಧಾರೆ ಅಂತ ಅವರಿಗೆ ಗೊತ್ತಿಲ್ಲ ಅಂತ ಹೇಳಿದ್ಧಾರೆ. ಅಲ್ಲದೆ ಹೆಚ್​.ವಿಶ್ವನಾಥ್​​ರ ಭ್ರಷ್ಟಾಚಾರ ಆರೋಪ ಅದು ಅವರ ವೈಯಕ್ತಿಕ ಅಭಿಪ್ರಾಯ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply