ರಾಜ್ಯದಲ್ಲಿ ಮತ್ತೆ 15 ಮಂದಿಗೆ ಕೊರೋನಾ..! ಒಟ್ಟು ಸಂಖ್ಯೆ 247ಕ್ಕೆ ಏರಿಕೆ

masthmagaa.com:

ರಾಜ್ಯದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ. ಇಂದು ಮತ್ತೆ 15 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಅಂತ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇಂದು ಕೊರೋನಾ ಪತ್ತೆಯಾದವರಲ್ಲಿ ಧಾರವಾಡದ ನಾಲ್ವರು ಸೇರಿದ್ದಾರೆ. ಇವರು 194ನೇ ಸೋಂಕಿತನ ಜೊತೆ ಸಂಪರ್ಕ ಹೊಂದಿದ್ದರು ಅಂತ ತಿಳಿದು ಬಂದಿದೆ.

ಇನ್ನು ಮಂಡ್ಯದ ಮೂವರಲ್ಲಿ ಕೊರೋನಾ ಪತ್ತೆಯಾಗಿದ್ದು, ಮಳವಳ್ಳಿಯ 8 ವರ್ಷದ ಬಾಲಕಿಗೂ ಸೋಂಕು ತಗುಲಿದೆ.

ಬೆಳಗಾವಿಯ ಮೂವರಲ್ಲಿ, ಬೀದರ್ ಮತ್ತು ಬಾಗಲಕೋಟೆಯ ತಲಾ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

-masthmagaa.com

Contact Us for Advertisement

Leave a Reply