ಮತ್ತೆ 6 ಮಂದಿಗೆ ಕೊರೋನಾ..! ದಾವಣಗೆರೆ ಈಗ ರೆಡ್​ ಜೋನ್​​​

masthmagaa.com

ದಾವಣಗೆರೆಯಲ್ಲಿ ಮತ್ತೆ 6 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯೊಂದರಲ್ಲೇ 10 ಮಂದಿಗೆ ಸೋಂಕು ತಗುಲಿದಂತಾಗಿದೆ. ಈ ಬಗ್ಗೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ.

ಇಂದು ಬೆಳಗ್ಗೆಯಷ್ಟೇ ಮಂಡ್ಯದ 8 ಮತ್ತು ಬೆಳಗಾವಿಯ ಮೂವರಲ್ಲಿ ಸೋಂಕು ಪತ್ತೆಯಾಗಿತ್ತು.. ಇದೀಗ ರಾಜ್ಯದಲ್ಲಿ ಒಟ್ಟು ಸೋಂಕು ಪೀಡಿತರ ಸಂಖ್ಯೆ 582ಕ್ಕೆ ಏರಿಕೆಯಾಗಿದೆ.

ಇನ್ನು ರಾಜ್ಯದಲ್ಲಿ ಈವರೆಗೆ 22 ಮಂದಿ ಸಾವನ್ನಪ್ಪಿದ್ದಾರೆ.

masthmagaa.com

Contact Us for Advertisement

Leave a Reply