ಕೊರೋನಾ ನಿರ್ಬಂಧ ತೆರವು: ಕೆಲವರಿಗೆ ಸಿಹಿ? ಇನ್ನೂ ಕೆಲವರಿಗೆ ಕಹಿ?

masthmagaa.com:

ಕೊರೋನಾ ಹಾವಳಿ ಕಮ್ಮಿಯಾದ ಹಿನ್ನೆಲೆ ಕೆಲವೊಂದು ನಿರ್ಬಂಧಗಳನ್ನ ತೆರವು ಮಾಡ್ಬೇಕು ಅನ್ನೋ ಒತ್ತಡ ರಾಜ್ಯ ಸರ್ಕಾರದ ಮೇಲೆ ಹೆಚ್ಚಾಗಿತ್ತು. ಈ ಸಂಬಂಧ ಇವತ್ತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೀತು. ಸಭೆಯಲ್ಲಿ ಹಲವು ನಿರ್ಧಾರಗಳನ್ನ ತೆಗೆದುಕೊಳ್ಳಲಾಗಿದೆ. ಕೆಲವೊಂದಕ್ಕೆ ರಿಲೀಫ್​ ನೀಡಿದ್ರೆ, ಇನ್ನೂ ಕೆಲವೊಂದರ ಮೇಲಿದ್ದ ನಿರ್ಬಂಧಗಳು ಮುಂದುವರಿದಿವೆ. ಯಾವುದಕ್ಕೆ ರಿಲೀಫ್​, ಯಾವುದಕ್ಕೆ ನಿರ್ಬಂಧ ಮುಂದುವರಿದಿದೆ ಅಂತ ನೋಡೋದಾದ್ರೆ.

ಯಾವುದಕ್ಕೆ ರಿಲೀಫ್​?
– ಜನವರಿ 31ರಿಂದ ರಾಜ್ಯಾದ್ಯಂತ ನೈಟ್‌ ಕರ್ಫ್ಯೂ ಇರೋದಿಲ್ಲ.
– ಬೆಂಗಳೂರಿನಲ್ಲಿ ಬಂದ್​ ಆಗಿದ್ದ 1ರಿಂದ 9ನೇ ತರಗತಿಗಳಿಗೆ ಜನವರಿ 31ರಿಂದ ಭೌತಿಕ ತರಗತಿಗಳು ಆರಂಭ.
– ಸಾರ್ವಜನಿಕ ಸಾರಿಗೆಯಲ್ಲಿ 100% ಆಸನಗಳ ಭರ್ತಿಗೆ ಅನುಮತಿ.
– ಹೋಟೆಲ್​, ರೆಸ್ಟೋರೆಂಟ್​, ಬಾರ್​, ಪಬ್​ಗಳಲ್ಲಿ 100%ಗೆ ಅವಕಾಶ.
– ಮದುವೆಗಳು ತೆರೆದ ಪ್ರದೇಶದಲ್ಲಾದ್ರೆ 300 ಜನರಿಗೆ, ಮುಚ್ಚಿದ ಪ್ರದೇಶಗಳಲ್ಲಾದ್ರೆ 200 ಜನರಿಗೆ ಅವಕಾಶ.
– ಎಲ್ಲಾ ಕಚೇರಿಗಳಲ್ಲಿ 100% ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅವಕಾಶ.
– ಧಾರ್ಮಿಕ ಸ್ಥಳಗಳಲ್ಲಿ ಬಂದ್​ ಆಗಿದ್ದ ಸೇವೆಗಳು ಓಪನ್​. ಆದ್ರೆ ಒಂದು ಸಮಯದಲ್ಲಿ 50 ಜನರಿಗೆ ಮಾತ್ರ ಅವಕಾಶ.

ಯಾವುದಕ್ಕೆ ನಿರ್ಬಂಧ?
– ಥಿಯೇಟರ್​, ಸಿನಿಮಾ ಹಾಲ್​, ಮಲ್ಟಿಪ್ಲೆಕ್ಸ್​ಗಳಲ್ಲಿ 50% ನಿಯಮ ಮುಂದುವರಿಕೆ.
– ಜಾತ್ರೆ, ರ್ಯಾಲಿ, ಪ್ರತಿಭಟನೆ, ಸಾಮಾಜಿಕ ಸೇರುವಿಕೆ, ಧಾರ್ಮಿಕ ಸೇರುವಿಕೆ, ರಾಜಕೀಯ ಕಾರ್ಯಕ್ರಮಗಳ ಮೇಲಿನ ನಿಷೇಧ ಮುಂದುವರಿಕೆ.
– ಸ್ವಿಮ್ಮಿಂಗ್ ಪೂಲ್​, ಜಿಮ್​ಗಳಲ್ಲಿ 50% ನಿಯಮ ಮುಂದುವರಿಕೆ.
– ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಸ್ಟೇಡಿಯಂಗಳಲ್ಲಿ 50% ನಿಯಮ ಮುಂದುವರಿಕೆ.
– ಮಹಾರಾಷ್ಟ್ರ, ಕೇರಳ, ಗೋವಾದಿಂದ ಬರೋರಿಗೆ ಈಗಿರುವ ನಿಯಮ ಮುಂದುವರಿಕೆ.

-masthmagaa.com

Contact Us for Advertisement

Leave a Reply