ಯಾವ ಲಸಿಕೆ ಹಾಕಿಸಿಕೊಳ್ಳಬೇಕು ಅನ್ನೋ ಆಯ್ಕೆ ಕೊಡಿ: ವೈದ್ಯರ ಕೂಗು

masthmagaa.com:

ಒಂದ್ಕಡೆ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯಬಾರದು ಅಂತ ಕೇಂದ್ರ ಸರ್ಕಾರ ಹೇಳ್ತಿದ್ರೆ, ಮತ್ತೊಂದುಕಡೆ ‘ಕೋವಿಶೀಲ್ಡ್​’ ಮತ್ತು ‘ಕೋವಾಕ್ಸಿನ್’​ ಲಸಿಕೆ ಪೈಕಿ ಯಾವುದನ್ನ ಹಾಕಿಸಿಕೊಳ್ಳಬೇಕು ಅನ್ನೋದನ್ನ ಆಯ್ಕೆ ಮಾಡಿಕೊಳ್ಳುವ ಅಧಿಕಾರ ಲಸಿಕೆ ಹಾಕಿಸಿಕೊಳ್ಳೋರಿಗೇ ಕೊಡ್ಬೇಕು ಅನ್ನೋ ಕೂಗು ಜೋರಾಗಿದೆ. ಸದ್ಯ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕ್ತಿರೋದ್ರಿಂದ ಅವರಿಗೆ ಲಸಿಕೆಯನ್ನ ಆಯ್ಕೆ ಮಾಡಿಕೊಳ್ಳುವ ಅವಕಾಶ ಕೊಡ್ಬೇಕು ಅಂತ ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್​ ಆಗ್ರಹಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಫಸ್ಟ್ ಅಫ್ ಆಲ್​ ಲಸಿಕೆ ಹಾಕಿಸಿಕೊಳ್ಳೋದು ಕಡ್ಡಾಯವಲ್ಲ. ಜೊತೆಗೆ ಲಸಿಕೆ ಆಯ್ಕೆ ಮಾಡಿಕೊಳ್ಳಲು ಡಿಸಿಜಿಐ ಕೂಡ ಅವಕಾಶ ಕೊಟ್ಟಿಲ್ಲ. ಹೀಗಾಗಿ ನನ್ನ ಮನವಿ ಏನಂದ್ರೆ ಭಾರತ್ ಬಯೋಟೆಕ್​ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಲಸಿಕೆಯನ್ನ ಎಲ್ಲಾ ವೈದ್ಯರು ಮತ್ತು ನಾಗರಿಕರು ಒಪ್ಪಿಕೊಳ್ಳಿ ಅಂತ ಡಾ. ಕೆ. ಸುಧಾಕರ್ ಹೇಳಿದ್ದಾರೆ. ಅಂದ್ಹಾಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಲಸಿಕೆಯ 3ನೇ ಹಂತದ ಮಾನವ ಪ್ರಯೋಗ ಇನ್ನೂ ನಡೀತಿರೋದ್ರಿಂದ ಈ ಸಲಿಕೆ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

-masthmagaa.com

Contact Us for Advertisement

Leave a Reply