ಹಿಂದೂ ಅನಾಥೆಯನ್ನು ಸಾಕಿ ಹಿಂದೂಗೆ ಕೊಟ್ಟು ಮದುವೆ ಮಾಡಿದ ಮುಸ್ಲಿಂ ವ್ಯಕ್ತಿ!

masthmagaa.com:

ತನ್ನವರನ್ನೆಲ್ಲಾ ಕಳೆದುಕೊಂಡು ಅನಾಥೆಯಾಗಿದ್ದ ಹಿಂದೂ ಬಾಲಕಿಯನ್ನ ಸ್ವಂತ ಮಗಳಂತೆ ಸಾಕಿದ್ದ ವಿಜಯಪುರದ ಮುಸ್ಲಿಂ ವ್ಯಕ್ತಿಯೊಬ್ಬರು, ಆಕೆಗೆ 18 ವರ್ಷ ಆಗ್ತಿದ್ದಂತೇ ಹಿಂದೂ ಯುವಕನ ಜೊತೆಗೆ ಹಿಂದೂ ಸಂಪ್ರದಾಯದಂತೆ ಮದ್ವೆ ಮಾಡಿಕೊಟ್ಟು ಸೌಹಾರ್ದತೆ ಮೆರೆದಿದ್ದಾರೆ. ಅಂದ್ಹಾಗೆ 10 ವರ್ಷದ ಹಿಂದೆ ಪೂಜಾ ಒಡಗೇರಿ ಅನ್ನೋ ಬಾಲಕಿ ತನ್ನ ತಂದೆ-ತಾಯಿ, ಅಜ್ಜಿಯನ್ನೆಲ್ಲಾ ಕಳೆದುಕೊಂಡು ಅನಾಥವಾಗಿದ್ದಳು. ಈ ವೇಳೆ ಮೆಹಬೂಬ್ ಮಸಳಿ ಅನ್ನೋರು ತಮ್ಮ ಪತ್ನಿ ಮತ್ತು ನಾಲ್ವರು ಮಕ್ಕಳ ಜೊತೆ ಪೂಜಾಳಿಗೂ ಆಶ್ರಯ ನೀಡಿ ಸಾಕಿದ್ದರು. ಈ ಬಗ್ಗೆ ಮಾತನಾಡಿರೋ ಮೆಹಬೂಬ್​, ಆಕೆಯನ್ನ ಆಕೆಯ ಧರ್ಮದ ಹುಡುಗನಿಗೆ ಮದ್ವೆ ಮಾಡಿಕೊಡೋದು ನನ್ನ ಜವಾಬ್ದಾರಿಯಾಗಿತ್ತು. ಆಕೆ ನಮ್ಮ ಮನೆಯಲ್ಲಿ 10 ವರ್ಷಕ್ಕೂ ಹೆಚ್ಚು ಕಾಲ ವಾಸವಿದ್ದಳು. ಆದ್ರೆ ಯಾವತ್ತೂ ಮುಸ್ಲಿಂ ಧರ್ಮದ ಸಂಪ್ರದಾಯವನ್ನ ಪಾಲಿಸುವಂತೆ ಬಲವಂತ ಮಾಡಿಲ್ಲ. ಅಥವಾ ಮುಸ್ಲಿಂ ಯುವಕನನ್ನ ಮದ್ವೆಯಾಗು ಅಂತ ಹೇಳಿಲ್ಲ. ಅದು ನಮ್ಮ ಧರ್ಮದ ತತ್ವಗಳಿಗೆ ವಿರುದ್ಧ ಅಂತ ಹೇಳಿದ್ದಾರೆ.
ಸಮಾಜ ಸೇವೆಗೆ ಹೆಚ್ಚು ಹೆಸರುವಾಸಿಯಾಗಿರುವ ಮಸಳಿಯವರು, ಗಣೇಶ ಹಬ್ಬದ ಆಚರಣಾ ಸಮಿತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದರು. ಇದಲ್ಲದೆ, ಪಟ್ಟಣದ ಉತ್ಸವ ಸಮಿತಿಯ ಸದಸ್ಯರೂ ಆಗಿದ್ದಾರೆ.

-masthmagaa.com

Contact Us for Advertisement

Leave a Reply