ರಾಜ್ಯದಲ್ಲಿ ಮತ್ತೆ ಟಫ್ ರೂಲ್ಸ್! ಏನೆಲ್ಲಾ ನಿರ್ಬಂಧ? ಕಂಪ್ಲೀಟ್ ಡೀಟೈಲ್ಸ್​​​

masthmagaa.com:

ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊರೋನಾ ಹಾವಳಿ ಹೆಚ್ಚಿರೋ ಹಿನ್ನೆಲೆ ಈ ಎರಡು ರಾಜ್ಯಗಳ ಜೊತೆ ಗಡಿ ಹಂಚಿಕೊಂಡಿರೋ ನಮ್ಮ ರಾಜ್ಯದ ಜಿಲ್ಲೆಗಳಲ್ಲಿ ವೀಕೆಂಡ್​ ಕರ್ಫ್ಯೂ ಜಾರಿಗೆ ಬಂದಿದೆ.

ಮತ್ತೆ ಬಂತು ಕೊರೋನಾ ರೂಲ್ಸ್​!

– ಕೇರಳ ಜೊತೆ ಗಡಿ ಹಂಚಿಕೊಳ್ಳೋ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳು.. ಹಾಗೂ ಮಹಾರಾಷ್ಟ್ರ ಜೊತೆ ಗಡಿ ಹಂಚಿಕೊಳ್ಳೋ ಬೆಳಗಾವಿ, ವಿಜಯಪುರ, ಕಲಬುರಗಿ, ಬೀದರ್ ಜಿಲ್ಲೆಗಳು ಇಂದು ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಬಹುತೇಕ ಬಂದ್​​​ ಆಗಿರಲಿವೆ.
– ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಈ ಜಿಲ್ಲೆಗಳು ಬಹುತೇಕ ಬಂದ್​​​
– ಈ ಅವಧಿಯಲ್ಲಿ ಅಗತ್ಯ ಸೇವೆಗಳು ಮಾತ್ರ ಲಭ್ಯವಿರಲಿದೆ.
– ದಿನಸಿ, ಹಣ್ಣು, ತರಕಾರಿ, ಮಾಂಸ, ಮೀನು, ಹಾಲಿನ ಅಂಗಡಿಗಳು ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಓಪನ್.
– ಬೀದಿಬದಿ ವ್ಯಾಪಾರ ಮತ್ತು ಸೊಸೈಟಿಗಳು ಮಧ್ಯಾಹ್ನ 2 ಗಂಟೆವರೆಗೆ ಓಪನ್​.
– ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಅಗತ್ಯವಸ್ತು ಖರೀದಿಗೆ ಅವಕಾಶ.
– ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮದ್ಯ ಪಾರ್ಸಲ್​ಗೆ ಅವಕಾಶ.
– ದಿನದ 24 ಗಂಟೆಯೂ ಹೋಂ ಡೆಲಿವರಿಗೆ ಅವಕಾಶ.
– ಹೋಟೆಲ್​, ರೆಸ್ಟೋರೆಂಟ್​ಗಳಲ್ಲಿ ಪಾರ್ಸೆಲ್ ಮತ್ತು ಹೋಂ ಡೆಲಿವರಿಗೆ ಮಾತ್ರ ಅವಕಾಶ.
– ಬಸ್​, ರೈಲು ಮತ್ತು ವಿಮಾನ ಸಂಚಾರಕ್ಕೆ ಅವಕಾಶ. ಬಸ್​, ರೈಲು ಮತ್ತು ವಿಮಾನ ನಿಲ್ದಾಣಗಳಿಗೆ ಜನರನ್ನ ಕರೆದುಕೊಂಡು ಹೋಗಲು ಅಥವಾ ಬರಲು ಖಾಸಗಿ ವಾಹನ ಮತ್ತು ಟ್ಯಾಕ್ಸಿಗಳಿಗೆ ಅವಕಾಶ. ಆದ್ರೆ ಅದಕ್ಕೆ ಸೂಕ್ತ ದಾಖಲೆಗಳನ್ನ ತೋರಿಸಬೇಕು.
– ಮದುವೆಗೆ ಗರಿಷ್ಠ 100 ಜನ ಸೇರಿಸಲು ಮಾತ್ರ ಅವಕಾಶ.
– ಅಂತ್ಯ ಸಂಸ್ಕಾರಕ್ಕೆ ಗರಿಷ್ಠ 20 ಜನ ಮಾತ್ರ ಸೇರಲು ಅವಕಾಶ.
– ತುರ್ತು ಮತ್ತು ಅವಶ್ಯಕವಾದ ಕೈಗಾರಿಕೆ, ಕಂಪನಿ, ಸಂಸ್ಥೆಗಳನ್ನ ತೆರೆಯಲು ಅವಕಾಶ. ಅಂತಹ ಕಂಪನಿಗಳ ಸಿಬ್ಬಂದಿ ಐಡಿ ಕಾರ್ಡ್ ತೋರಿಸಿ ಓಡಾಡಬಹುದು. ಸಾಧ್ಯವಾದಷ್ಟಯ ಮನೆಯಿಂದಲೇ ಕೆಲಸ ಮಾಡಲು ಆದ್ಯತೆ ಕೊಡಬೇಕು.
– ರೋಗಿಗಳು ಮತ್ತು ಅವರ ಸಹಾಯಕರು ಯಾವುದಾದ್ರೂ ಪ್ರೂಫ್​ ತೋರಿಸಿ ಓಡಾಡಬಹುದು.
– ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಹೋಗುವವರು ಯಾವುದಾದ್ರೂ ಪ್ರೂಫ್​ ತೋರಿಸಿ ಹೋಗಬಹುದು.
– ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆಗೆ ಅವಕಾಶ.
– ಧಾರ್ಮಿಕ ಕೇಂದ್ರಗಳನ್ನ ತೆರೆಯಲು ಅವಕಾಶ. ಆದ್ರೆ ಜಾತ್ರೆ, ಮೆರವಣಿಗೆ, ಗುಂಪು ಸೇರುವಿಕೆಗೆ ಅವಕಾಶವಿಲ್ಲ.
– ಇಡೀ ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರೋ ನೈಟ್​ ಕರ್ಫ್ಯೂ ರಾತ್ರಿ 10 ಗಂಟೆ ಬದಲಾಗಿ 9 ಗಂಟೆಯಿಂದಲೇ ಜಾರಿ
– ನೈಟ್​ ಕರ್ಫ್ಯೂ ಬೆಳಗ್ಗೆ 5 ಗಂಟೆವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾರಿಯಲ್ಲಿರಲಿದೆ
– ನೈಟ್​ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಪೊಲೀಸ್ ಇಲಾಖೆಗೆ ಸರ್ಕಾರದಿಂದ ಸೂಚನೆ
– ಹಬ್ಬದ ಸಮಯದಲ್ಲಿ ಸ್ಥಳೀಯವಾಗಿ ಕೆಲವೊಂದು ನಿರ್ಬಂಧಗಳನ್ನ ಜಾರಿಗೆ ತರಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ.
– ಎರಡು ಹಂತದಲ್ಲಿ ಶಾಲೆಗಳನ್ನ ಓಪನ್ ಮಾಡಲು ಸರ್ಕಾರದ ನಿರ್ಧಾರ
– ಆಗಸ್ಟ್​ 23ರಿಂದ 9, 10, 11 ಮತ್ತು 12ನೇ ತರಗತಿಗಳು ಆರಂಭ
– ಈ ಶಾಲೆಗಳು ಆಲ್ಟರ್​ನೇಟಿವ್ ಬ್ಯಾಚ್​​ಗಳಲ್ಲಿ ನಡೆಯಲಿವೆ
– ವಾರದಲ್ಲಿ ಎರಡು ಬ್ಯಾಚ್​​ ಇರುತ್ತೆ. ಒಂದು ಬ್ಯಾಚ್​ 3 ದಿನ ನಡೆದ್ರೆ, ಮತ್ತೊಂದು ಬ್ಯಾಚ್​ ಉಳಿದ 3 ದಿನ ನಡೆಯುತ್ತೆ
– ಆಗಸ್ಟ್​ ತಿಂಗಳ ಕೊನೇ ವಾರದಲ್ಲಿ ಕೊರೋನಾ ಪರಿಸ್ಥಿತಿ ಅವಲೋಕಿಸಿ 1ರಿಂದ 8ನೇ ತರಗತಿಗಳನ್ನ ತೆರೆಯೋ ಬಗ್ಗೆ ತೀರ್ಮಾನ
– ತಜ್ಞರ ಜೊತೆ ಸಭೆ ನಡೆಸಿದ ಬಳಿಕ ಈ ಎಲ್ಲಾ ನಿರ್ಧಾರಗಳನ್ನ ತೆಗೆದುಕೊಳ್ಳಲಾಗಿದೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply