ಕಾಶ್ಮೀರದ ವಿಚಾರದಲ್ಲಿ ಮತ್ತೆ ಚೀನಾ ಯೂ ಟರ್ನ್..!

ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ನಾಳೆ ಭಾರತಕ್ಕೆ ಬರ್ತಿದ್ದಾರೆ. ಆದ್ರೆ ನಿನ್ನೆಯಷ್ಟೇ ಕಾಶ್ಮೀರ ವಿಚಾರದಲ್ಲಿ ಭಾರತಕ್ಕೆ ಬೆಂಬಲಿಸಿದ್ದ ಚೀನಾ ಈಗ ಮತ್ತೆ ಯೂ ಟರ್ನ್ ಹೊಡೆದಿದೆ. ಭಾರತ ಮತ್ತು ಪಾಕ್ ಮಾತುಕತೆ ಮೂಲಕ ಜಮ್ಮು ಕಾಶ್ಮೀರ ವಿಚಾರವನ್ನು ಬಗೆಹರಿಸಿಕೊಳ್ಳಬೇಕು ಎಂದಿದ್ದ ಚೀನಾ ಈಗ ಈ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಬಗೆಹರಿಸಿಕೊಳ್ಳಬೇಕು ಎಂದಿದೆ.

ಸದ್ಯ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಚೀನಾ ಪ್ರವಾಸದಲ್ಲಿದ್ದು, ಕ್ಸಿ ಜಿನ್‍ಪಿಂಗ್ ಭೇಟಿಯಾಗಿದ್ದಾರೆ. ಈ ಭೇಟಿಯ ನಂತರ ಚೀನಾ ವಿದೇಶಾಂಗ ಇಲಾಖೆ ಜಮ್ಮು ಕಾಶ್ಮೀರದ ವಿಚಾರವಾಗಿ ಈ ಹೇಳಿಕೆ ಬಿಡುಗಡೆ ಮಾಡಿದೆ. ಜಮ್ಮು ಕಾಶ್ಮೀರದ ಮೇಲೆ ನಾವು ನಿಗಾ ವಹಿಸಿದ್ದೇವೆ. ಇದೊಂದು ಐತಿಹಾಸಿಕ ಸಮಸ್ಯೆಯಾಗಿದ್ದು, ವಿಶ್ವಸಂಸ್ಥೆ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದಿದೆ.

ನಾಳೆ ಮಧ್ಯಾಹ್ನ 1.30ಕ್ಕೆ ಚೆನ್ನೈಗೆ ಆಗಮಿಸಲಿರುವ ಕ್ಸಿ ಜಿನ್‍ಪಿಂಗ್ ಒಂದು ದಿನ ಇಲ್ಲೇ ಇರಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಐದೂವರೆ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಲಿದ್ದಾರೆ.

Contact Us for Advertisement

Leave a Reply