ಮದುವೆ ಸ್ಟೇಜ್​​​​​​ಗೆ ಡ್ಯಾನ್ಸ್ ಮಾಡಿಕೊಂಡೇ ಎಂಟ್ರಿ ಕೊಟ್ಟ ಮಧುಮಗಳು..!

ಕೇರಳ: ಸಾಮಾನ್ಯವಾಗಿ ಮದುವೆಗಳಲ್ಲಿ ಮದುಮಗ ಫುಲ್ ಜೋಶ್​ನಲ್ಲಿ ಇರುತ್ತಾನೆ. ಮದುಮಗಳು ತಲೆ ತಗ್ಗಿಸಿ ನಾಚಿಕೆಯಿಂದ ಇರ್ತಾರೆ. ಆದ್ರೆ ಕೇರಳದಲ್ಲಿ ಮದುಮಗಳೊಬ್ಬಳು ಮದುವೆ ಹಾಲ್​​ಗೆ ಬರುವಾಗ ತಲೆ ತಗ್ಗಿಸೋದು, ನಾಚಿಕೆಯಿಂದ ಇರೋದು ಬಿಡಿ.. ಹಂಗಾಮಾ ಎಬ್ಬಿಸಿಬಿಟ್ಟಿದ್ದಾರೆ. ಡ್ಯಾನ್ಸ್ ಮಾಡಿಕೊಂಡೇ ಮದುವೆ ಹಾಲ್​​ಗೆ ಎಂಟ್ರಿ ಕೊಟ್ಟು, ಮದುಮಗನಿಗೆ ಶಾಕ್ ಕೊಟ್ಟಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದ್ದು, ಈಕೆಯನ್ನು ಅಂಜಲಿ ಎಂದು ಗುರುತಿಸಲಾಗಿದೆ. ಕಣ್ಣೂರಿನ ಸಿಆರ್ ಆಡಿಟೋರಿಯಂನಲ್ಲಿ ಈ ಘಟನೆ ನಡೆದಿದೆ.

Contact Us for Advertisement

Leave a Reply