ಕೇರಳದಲ್ಲಿ ಮತ್ತೆ 6 ಜನರಿಗೆ ಕೊರೋನಾ ವೈರಸ್.. ಹೆಚ್ಚಿದ ಆತಂಕ

masthmagaa.com:

ಇಡೀ ದೇಶದಲ್ಲಿ ಕೊರೋನಾ ಭೀತಿ ಹೆಚ್ಚಾಗಿರುವ ನಡುವೆಯೇ ದೇವರ ನಾಡು ಕೇರಳದಲ್ಲಿ ಹೊಸದಾಗಿ 6 ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ವೈರಸ್ ಹರಡದಂತೆ ಸರ್ಕಾರ  ನಾನಾ ಪ್ರಯತ್ನ ಮಾಡುತ್ತಿರುವಾಗಲೇ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬಂದಿರೋದು ಆತಂಕ ಹೆಚ್ಚಿಸಿದೆ.  ಈ ಮೂಲಕ ಕೇರಳದಲ್ಲಿ ಕೊರೋನಾ ವೈರಸ್​ ದೃಢಪಟ್ಟ ಪ್ರಕರಣಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಮೊದಲ ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿದ್ದು ಕೂಡ ಕೇರಳದಲ್ಲೇ. ಚೀನಾದಿಂದ ಬಂದಿದ್ದ ವಿದ್ಯಾರ್ಥಿನಿಯಲ್ಲಿ ಮೊದಲು ವೈರಸ್ ಕಾಣಿಸಿಕೊಂಡಿತ್ತು.

ಹೊಸದಾಗಿ ಪತ್ತೆಯಾದ 6 ಪ್ರಕರಗಳ ಬಗ್ಗೆ ಮಾಹಿತಿ ನೀಡಿದ ಕೇರಳ ಸಿಎಂ ಪಿಣರಾಯಿ ವಿಜಯನ್, 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾರ್ಚ್​ 31ರವರೆಗೆ ರಜೆ ಘೋಷಿಸಿದ್ದಾರೆ. ಜೊತೆಗೆ ಅಂಗನವಾಡಿ, ಟ್ಯೂಷನ್ ಕ್ಲಾಸ್​ ಹಾಗೂ ಮದರಸಗಳನ್ನು ಬಂದ್ ಮಾಡಲು ಆದೇಶಿಸಿದ್ದಾರೆ.

-masthmagaa.com

Contact Us for Advertisement

Leave a Reply