ಕಿಮ್ ಜಾಂಗ್ ಉನ್ ಆರೋಗ್ಯ ಗಂಭೀರ… ಉತ್ತರಾಧಿಕಾರಿ ಯಾರು..?

masthmagaa.com:

ಕಿಮ್ ಜಾಂಗ್ ಉನ್ ಸಾವನ್ನಪ್ಪಿದ್ರೆ ಹೊಸ ಸರ್ವಾಧಿಕಾರಿ ಯಾರಾಗುತ್ತಾರೆ ಅನ್ನೋ ಚರ್ಚೆ ಈಗ ಆರಂಭವಾಗಿದೆ. ಯಾಕಂದ್ರೆ ಅನಾರೋಗ್ಯ ಹಿನ್ನೆಲೆ ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸದ್ಯ ‘ತುಂಬಾ ಅಪಾಯ’ದಲ್ಲಿದ್ದಾರೆ ಅಂತ ಈ ವಿಷಯದ ಬಗ್ಗೆ ಮಾಹಿತಿ ಇರುವ ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಕ್ಷಿಣ ಕೊರಿಯಾದ ಡೈಲಿ ಎನ್​ಕೆ ಸುದ್ದಿ ಸಂಸ್ಥೆ ಪ್ರಕಾರ, ಏಪ್ರಿಲ್ 12ರಂದು ಕಿಮ್ ಜಾಂಗ್ ಉನ್​ಗೆ ಹ್ಯಾಂಗ್ಸಂಗ್ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ನಡೆದಿತ್ತು.  36 ವರ್ಷದ ಕಿಮ್​ ಸದ್ಯ ಮೌಂಟ್ ಕುಮ್ಮಾಂಗ್ ರೆಸಾರ್ಟ್​ನಲ್ಲಿರೋ ವಿಲ್ಲಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಕಿಮ್ ಜಾಂಗ್ ಉನ್ ಅವರ ಉತ್ತರಾಧಿಕಾರಿ ಯಾರು ಅನ್ನೋ ಪ್ರಶ್ನೆ ಮೂಡುತ್ತೆ.. ಈ ಮಹಾನುಭವ ಅಧಿಕಾರ ವಹಿಸಿಕೊಂಡ ಬಳಿಕ ಕುಟುಂಬದ ಪ್ರಮುಖ ಸದಸ್ಯರೇ ಇಲ್ಲವಾಗಿದ್ದಾರೆ. ಅಂದ್ರೆ ಈತನ ಅಣ್ಣ ಕಿಮ್ ಜೊಂಗ್-ನಾಮ್ ಅವರನ್ನು ಫೆಬ್ರವರಿ 2017ರಲ್ಲಿ ಮಲೇಷ್ಯಾದಲ್ಲಿ ರಾಸಾಯನಿಕ ದಾಳಿಯಲ್ಲಿ ಹತ್ಯೆ ಮಾಡಲಾಯ್ತು. ಚಿಕ್ಕಪ್ಪ ಜಾಂಗ್ ಸಾಂಗ್-ಥೇಕ್ ಅವರನ್ನು 2013ರಲ್ಲಿ ಕಾನೂನು ಬಾಹಿರವಾಗಿ ಮಷಿನ್ ಗನ್‌ಗಳನ್ನು ಬಳಸಿದ ಆರೋಪದ ಅಡಿಯಲ್ಲಿ ಕಿಮ್ ಜಾಂಗ್ ಉನ್ ಸೂಚನೆ ಮೇರೆಗೆ ಹತ್ಯೆ ಮಾಡಲಾಗಿತ್ತು.

ಹೀಗಾಗಿ ಕಿಮ್ ಜಾನ್​​ ಉನ್ ನಂತರ ಸರ್ವಾಧಿಕಾರಿ ಪಟ್ಟಕ್ಕಾಗಿ ಭಾರಿ ಲಾಬಿ ನಡೆಯಲಿದೆ. ವರ್ಕರ್ಸ್ ಪಾರ್ಟಿ ಆಫ್ ಕೊರಿಯಾದ ಹಿರಿಯ ನಾಯಕರು ಈ ಪಟ್ಟವನ್ನು ಅಲಂಕರಿಸುವ ಸಾಧ್ಯತೆ ಇದೆ. ಅಂತಹ ನಾಯಕರ ಸಾಲಿನಲ್ಲಿ ಸಂಘಟನೆ ಮತ್ತು ಮಾರ್ಗದರ್ಶನ ವಿಭಾಗದ ಅಧ್ಯಕ್ಷರಾಗಿರುವ ಚೋ ರ್ಯೊಂಗ್ ಹೇ ಮೊದಲಿಗರಾಗಿದ್ದಾರೆ.

ಇನ್ನು ಕಿಮ್ ಜಾಂಗ್ ಉನ್ ಅವರ ತಂದೆ-ತಾಯಿಗೆ ಕಿಮ್ ಯೋ ಜಾಂಗ್​  ಕೊನೆಯ ಮಗಳು.. ಅಂದ್ರೆ ಕಿಮ್ ಜಾಂಗ್ ಉನ್ ಅವರ ಸಹೋದರಿ.. ಈಕೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರಿಗೆ ವಿಶ್ವಾಸನೀಯ ಸಲಹೆಗಾರ್ತಿಯಾಗಿದ್ದರು. ಅಲ್ಲದೆ 2018ರಲ್ಲಿ ಉತ್ತರ ಕೊರಿಯಾದ ಪಾಲಿಟ್​​ಬ್ಯೂರೋಗೂ ನಾಮನಿರ್ದೇಶನಗೊಂಡಿದ್ದರು. ಈಕೆಗೆ ಸರ್ವಾಧಿಕಾರಿಯಾಗುವ ಅವಕಾಶವಿದ್ದರೂ ಉತ್ತರ ಕೊರಿಯಾದ ಸಾಂಪ್ರದಾಯಿಕ ಸಮಾಜ ಮತ್ತು ಆಡಳಿತದ ಉನ್ನತ ವರ್ಗ ಓರ್ವ ಮಹಿಳೆಯನ್ನು ಸರ್ವಾಧಿಕಾರಿಯನ್ನಾಗಿ ಒಪ್ಪಿಕೊಳ್ಳೋದು ತುಂಬಾ ಕಷ್ಟವಿದೆ.

ಇನ್ನು ಕಿಮ್ ಜಾಂಗ್ ಉನ್​​​​​​​ ಪತ್ನಿ ರಿ ಸೊಲ್ ಜು ಕೂಡ ಸರ್ವಾಧಿಕಾರಿ ಪಟ್ಟದ ರೇಸ್​ನಲ್ಲಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದು, ಅವರ ವಯಸ್ಸು ಮತ್ತು ಲಿಂಗದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಅಮೆರಿಕದ ಬಾಸ್ಕೆಟ್ ಬಾಲ್ ಆಟಗಾರ ಡೆನ್ನಿಸ್ ರಾಡ್ಮನ್​​​​​, ಕಿಮ್ ಜಾಂಗ್​​ ಉನ್​​ಗೆ ಆತ್ಮೀಯ ಗೆಳೆಯನಾಗಿದ್ದು, 2013ರಲ್ಲಿ ಕಿಮ್ ಜಾಂಗ್ ಉನ್ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಿಮ್ ಜಾಂಗ್ ಉನ್ ಅವರ ಮಗಳನ್ನು ಎತ್ತಿಕೊಂಡಿದ್ದೆ. ಆಕೆಯ ಹೆಸರು ಜು ಆಯ್ ಎಂದು ಕಿಮ್ ಜಾಂಗ್ ಉನ್ ತಿಳಿಸಿದ್ರು ಅಂತ ಡೆನ್ನಿಸ್ ಹೇಳಿಕೊಂಡಿದ್ದಾರೆ. ಆದ್ರೆ ಕಿಮ್ ಜಾಂಗ್ ಉನ್ ಮಕ್ಕಳ ವಯಸ್ಸು ಮತ್ತು ಲಿಂಗದ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಅವರು ಉತ್ತರ ಕೊರಿಯಾದ ಸರ್ವಾಧಿಕಾರಿ ಪಟ್ಟವನ್ನು ನಿಭಾಯಿಸುವಷ್ಟು ದೊಡ್ಡವರಾಗಿದ್ದಾರಾ..? ಈ ರೇಸ್​ನಲ್ಲಿ ಅವರೂ ಇದ್ದಾರಾ ಅನ್ನೋದು ಇನ್ನೂ ಸ್ಪಷ್ಟವಿಲ್ಲ…

ಅಂದ್ರೆ ಕಿಮ್ ಜಾಂಗ್ ಉನ್ ಬಳಿಕ ಅವರ ಸಹೋದರಿ ಕಿಮ್ ಯೋ ಜಾಂಗ್, ಪತ್ನಿ ರಿ ಸೊಲ್ ಜು ಮತ್ತು ವರ್ಕರ್ಸ್​ ಪಾರ್ಟಿ ಆಫ್ ಕೊರಿಯಾದ ಸಂಘಟನೆ ಮತ್ತು ಮಾರ್ಗದರ್ಶನ ವಿಭಾಗದ ಅಧ್ಯಕ್ಷರಾಗಿರುವ ಚೋ ರ್ಯೊಂಗ್ ಹೇ ನಡುವೆ ಸರ್ವಾಧಿಕಾರಿ ಪಟ್ಟಕ್ಕೆ ಲಾಬಿ ನಡೆಯಲಿದೆ. ಈ ಮೂವರಲ್ಲಿ ಯಾರಾದ್ರೂ ಒಬ್ಬರು ದೇಶದ ಆಡಳಿತದ ಚುಕ್ಕಾಣಿ ಹಿಡಿಯೋ ಸಾಧ್ಯತೆ ಇದೆ.

-masthmagaa.com

 

Contact Us for Advertisement

Leave a Reply