ಇಡಿ ನೋಟಿಸ್ ಬಗ್ಗೆ ಕೆ.ಎನ್.ರಾಜಣ್ಣ ಹೇಳಿದ್ದೇನು..?

ಮಾಜಿ ಶಾಸಕ ಕೆ.ಎನ್.ರಾಜಣ್ಣಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜಣ್ಣ, ಸೆಪ್ಟೆಂಬರ್ 24ರಂದು ಇಡಿ ನೋಟಿಸ್ ನೀಡಿದೆ. ನಿನ್ನೆಯೂ ಅಕ್ಟೋಬರ್ 9ರಂದು ವಿಚಾರಣೆಗೆ ಹಾಜರಾಗುಂತೆ ದೂರವಾಣಿ ಮತ್ತು ಇಮೇಲ್ ಮೂಲಕ ಸೂಚಿಸಲಾಗಿದೆ. ಆದ್ರೆ ಯಾವ ವಿಚಾರಕ್ಕೆ ನೋಟಿಸ್ ನೀಡಲಾಗಿದೆ ಅನ್ನೋದು ತಿಳಿಸಿಲ್ಲ. ನನಗೆ ಗೊತ್ತಿರೋ ಮಾಹಿತಿಯಂತೆ ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಹರ್ಷ ಶುಗರ್ಸ್‍ಗೆ 25 ಕೋಟಿ ರೂಪಾಯಿ ಸಾಲ ನೀಡಿದ್ದಕ್ಕೆ ನೋಟಿಸ್ ನೀಡಿರಬಹುದು.  ಆದ್ರೆ ನಾನು ಬ್ಯಾಂಕ್ ನಿಯಮಾನುಸಾರವಾಗಿಯೇ ಸಾಲ ನೀಡಿದ್ದು, ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುತ್ತೇನೆ ಅಂತ ತಿಳಿಸಿದ್ದಾರೆ.

Contact Us for Advertisement

Leave a Reply