ಕಾಂಗ್ರೆಸ್​ ಚಿಹ್ನೆಯಿಂದ್ಲೇ ಕುಮಾರಣ್ಣ ಸಿಎಂ ಆಗಿದ್ದು, ದೇವೇಗೌಡ್ರು ಪಿಎಂ ಆಗಿದ್ದು!

masthmagaa.com:

‘ಕಾಂಗ್ರೆಸ್ ಚಿಹ್ನೆ ಮತ್ತು  ಶಾಲಿನಿಂದಲೇ ಕುಮಾರಸ್ವಾಮಿ ಸಿಎಂ ಆಗಿದ್ದು. ಅದರಿಂದಲೇ ದೇವೇಗೌಡರು ದೇಶದ ಪ್ರಧಾನಿಯಾಗಿದ್ದು. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಕೂಡ ಕಾಂಗ್ರೆಸ್ ಚಿಹ್ನೆಯಿಂದಲೇ’ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಜಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ಕೊಟ್ಟಿದ್ದಾರೆ.

ಅಂದ್ಹಾಗೆ ಬೆಂಗಳೂರಿನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಹಸಿರು ಶಾಲು ತೊಟ್ಟು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು. ಈ ಬಗ್ಗೆ ಮಾತನಾಡಿದ್ದ ಹೆಚ್​.ಡಿ. ಕುಮಾರಸ್ವಾಮಿ, ‘ಕಾಂಗ್ರೆಸ್​ ಚಿಹ್ನೆಗೆ ಈಗ ಬೆಲೆ ಇಲ್ಲ. ಹೀಗಾಗಿ ಅವರು ಹಸಿರು ಶಾಲು ತೊಟ್ಟು ರಸ್ತೆಗಿಳಿದಿದ್ದಾರೆ’ ಅಂತ ಹೇಳಿದ್ದರು. ಹೆಚ್​ಡಿಕೆ ಈ ಹೇಳಿಕೆಗೆ ಡಿಕೆಶಿ ಈ ರೀತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply