ಖುಲಾಯಿಸಿತು ಅದೃಷ್ಟ.. ಬಡ ರೈತನಿಗೆ ಸಿಕ್ಕಿತು 50 ಲಕ್ಷದ ವಜ್ರ

masthmagaa.com:

ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಬಡ ರೈತನೊಬ್ಬನಿಗೆ ಗಣಿಯಲ್ಲಿ ಬರೋಬ್ಬರಿ 50 ಲಕ್ಷ ರೂಪಾಯಿ ಮೌಲ್ಯದ 10.69 ಕ್ಯಾರೆಟ್​​ ವಜ್ರ ಸಿಕ್ಕಿದೆ. ಆ ಅದೃಷ್ಟವಂತನ ಹೆಸರು ಆನಂದಿಲಾಲ್ ಖುಷ್ವಾ. ನಿಯಮದ ಪ್ರಕಾರ ಖುಷ್ವಾ ಅವರು ಈ ವಜ್ರವನ್ನು ಜಿಲ್ಲಾ ಗಣಿಗಾರಿಕೆ ಇಲಾಖೆಗೆ ನೀಡಿದ್ದಾರೆ.

ಅಂದ್ಹಾಗೆ ಪನ್ನಾ ಡೈಮಂಡ್ ರಿಸರ್ವ್ ಪ್ರದೇಶದ ಭೂಮಿಯನ್ನ ಸ್ಥಳೀಯ ರೈತರು ಮತ್ತು ಕಾರ್ಮಿಕರಿಗೆ ಮಧ್ಯಪ್ರದೇಶ ಸರ್ಕಾರ ಲೀಸ್​ಗೆ ನೀಡುತ್ತದೆ. ಈ ಭೂಮಿಯಲ್ಲಿ ಲೀಸ್ ಪಡೆದವರು ವಜ್ರ ಗಣಿಗಾರಿಕೆ ನಡೆಸುತ್ತಾರೆ. ಒಂದ್ವೇಳೆ ವಜ್ರ ಸಿಕ್ಕರೆ ಅದನ್ನು ಜಿಲ್ಲಾ ಗಣಿಗಾರಿಕಾ ಅಧಿಕಾರಿಗೆ ನೀಡಬೇಕು. ಬಳಿಕ ವಜ್ರವನ್ನು ಹರಾಜು ಹಾಕಿ ಬಂದ ಹಣದಲ್ಲಿ ಸರ್ಕಾರದ ರಾಯಧನ ಮತ್ತು ತೆರಿಗೆಗಳನ್ನ ಕಡಿತಗೊಳಿಸಿ ಠೇವಣಿದಾರರಿಗೆ ನೀಡಲಾಗುತ್ತದೆ.

ರಾಣಿಪುರ್ ಪ್ರದೇಶದಲ್ಲಿ ಕಳೆದ 6 ತಿಂಗಳಿಂದ ವಜ್ರ ಗಣಿಗಾರಿಕೆ ನಡೆಸುತ್ತಿರುವ ಆನಂದಿಲಾಲ್ ಖುಷ್ವಾಗೆ ಇತ್ತೀಚೆಗಷ್ಟೇ 70 ಸೆಂಟ್​ನ​ ವಜ್ರ ಸಿಕ್ಕಿತ್ತು. ಇದೀಗ 10.69 ಕ್ಯಾರೆಟ್​ನ ವಜ್ರ ಸಿಕ್ಕಿರೋದು ಜಾಕ್​ಪಾಟ್​ ಹೊಡೆದಂತಾಗಿದೆ. ಈ ವಜ್ರದ ಮೌಲ್ಯ ಬರೋಬ್ಬರಿ 50 ಲಕ್ಷ ರೂಪಾಯಿ ಅಂತ ಸ್ಥಳೀಯ ತಜ್ಞರು ಅಂದಾಜಿಸಿದ್ದಾರೆ. ಮಧ್ಯಪ್ರದೇಶದ ಬುಂದೇಲ್‌ಖಂಡ್ ಪ್ರದೇಶದ ಪನ್ನಾ ಜಿಲ್ಲೆಯು ವಜ್ರ ನಿಕ್ಷೇಪಕ್ಕೆ ಹೆಸರುವಾಸಿ.

-masthmagaa.com

Contact Us for Advertisement

Leave a Reply