ನೀವು ಇದ್ದಲ್ಲಿಗೆ ಸಿಂಹ ಓಡಿ ಬಂದ್ರೆ..! ಜೀವ ಬಾಯಿಗೆ ತರಿಸೋ ವಿಡಿಯೋ…

masthmagaa.com:

ಗುಜರಾತ್​: ಜನರ ಗುಂಪು ಇದ್ದ ಜಾಗಕ್ಕೆ ಸಿಂಹವೊಂದು ಓಡಿ ಬಂದ ಘಟನೆ ಗುಜರಾತ್​ನಲ್ಲಿ ನಡೆದಿದೆ. ಮಾಧವಪುರ ಗ್ರಾಮದಲ್ಲಿ ಸಿಂಹ ಕಾಣಿಸಿಕೊಂಡಿದ್ದರಿಂದ ಜನರೆಲ್ಲಾ ಒಟ್ಟಾಗಿ ನೋಡುತ್ತಿದ್ದರು. ಈ ವೇಳೆ ಒಂದೇ ಬಾರಿಗೆ ಜನರು ನಿಂತಿದ್ದ ಕಡೆಗೇ ಸಿಂಹ ಓಡಿ ಬಂದಿದೆ. ಸಿಂಹವನ್ನು ಹುಡುಕುತ್ತಾ ನಿಂತಿದ್ದ ಜನರೆಲ್ಲಾ ದಿಕ್ಕಾಪಾಲಾಗಿ ಓಡಿಹೋಗಿದ್ದಾರೆ. 7 ಸೆಕೆಂಡ್ ಇರುವ ಈ ವಿಡಿಯೋವನ್ನು ಅರಣ್ಯಾಧಿಕಾರಿ ಸುಶಾಂತ್ ನಂದ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ಭಯಾನಕ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ.

https://twitter.com/i/status/1236263449778196480

ಈ ವಿಡಿಯೋ ನೋಡಿದ ಹಲವರಿಗೆ ಒಂದು ಅನುಮಾನ ಕಾಡಿದೆ. ಅದೇನೆಂದರೆ ಇಂಥಹ ಪರಿಸ್ಥಿತಿಯಲ್ಲಿ ನಮ್ಮ ಜನ ಪ್ರಾಣಿಯನ್ನು ಉಳಿಸೋದೇ ಇಲ್ಲ. ಹೊಡೆದು ಹೊಡೆದು ಕೊಂದೇ ಬಿಡ್ತಾರೆ. ಹೀಗಾಗಿ ಜನ ಕಾಮೆಂಟ್ ಮಾಡಿ, ಸಿಂಹ ಸುರಕ್ಷಿತವಾಗಿದೆಯೇ ಅಂತ ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸುಶಾಂತ್ ನಂದ, ಸಿಂಹ ಸುರಕ್ಷಿತವಾಗಿದೆ ಅಂತ ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply