masthmagaa.com:

ಫ್ರೆಂಡ್ಸ್, ಜನವರಿ 12ರವರೆಗೆ, ಅಂದ್ರೆ ಮೂರು ತಿಂಗಳಿಗೂ ಮೊದಲು ಚೀನಾದಲ್ಲಿ ಮಾತ್ರ ಈ ಕೊರೋನಾ ವೈರಸ್​ ಕಾಣಿಸಿಕೊಂಡಿತ್ತು. ಅದನ್ನು ಬಿಟ್ಟರೆ ಬೇರೆ ಯಾವ ದೇಶದಲ್ಲೂ ಕಾಣಿಸಿಕೊಂಡಿರಲಿಲ್ಲ. ಆದ್ರೆ ಜನವರಿ 13 ನಂತರ ಇದು ಜಾಗತಿಕ ಸಮಸ್ಯೆಯಾಗಿ, ಪಿಡುಗಾಗಿ ಮಾರ್ಪಟ್ಟಿತು. ಥಾಯ್​ಲ್ಯಾಂಡ್​ನಲ್ಲಿ ಒಂದು ಪ್ರಕರಣ ಪತ್ತೆಯಾಯ್ತು. ಅದಾದ ಬಳಿಕ ಜಪಾನ್, ದಕ್ಷಿಣ ಕೊರಿಯಾ ಹಾಗೂ ಅಮೆರಿಕಗಳಲ್ಲಿ ಕಾಯಿಲೆ ಕಾಣಿಸಿಕೊಂಡಿತು. ಇದೀಗ ಇಡೀ ವಿಶ್ವದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಪ್ರವಾಹದಂತೆ ಹೆಚ್ಚಾಗುತ್ತಾ ಹೋಗ್ತಿದೆ.

ಸದ್ಯ 10 ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ದೃಢಪಟ್ಟಿವೆ. 55 ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಜನ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ ದಿನೇದಿನೆ ಹೆಚ್ಚಾಗ್ತಿದೆ, ಆಸ್ಪತ್ರೆಗಳು ರೋಗಿಗಳಿಂದ ತುಂಬಿ ಹೋಗಿದೆ. ಆದರೂ ಕೊರೋನಾ ವೈರಸ್ ಹರಡದೇ ಇರೋ ದೇಶಗಳು ಇದಾವಾ..? ಈ ಪ್ರಶ್ನೆಗೆ ಉತ್ತರ ಹೌದು.

ಅಂದ್ಹಾಗೆ ಒಟ್ಟು 193 ದೇಶಗಳು ವಿಶ್ವಸಂಸ್ಥೆಯ ಸದಸ್ಯತ್ವ ಹೊಂದಿವೆ. ಈ ಪೈಕಿ ಏಪ್ರಿಲ್ 2ರವರೆಗೆ 18 ದೇಶಗಳಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ದೃಢಪಟ್ಟಿಲ್ಲ. ಅವುಗಳೆಂದರೆ, ಕೊಮೊರೋಸ್, ಕಿರಿಬಾಟಿ, ಲೆಸೆಥೊ, ಮಾರ್ಷಲ್ ದ್ವೀಪಗಳು, ಮೈಕ್ರೋನೇಷ್ಯಾ, ನೌರು, ಉತ್ತರ ಕೊರಿಯಾ, ಪಲಾವ್​, ಸಮೋಸಾ, ಸಾವೋಟೋಮೆ & ಪ್ರಿನ್ಸಿಪೆ, ಸೋಲೊಮೋನ್ ದ್ವೀಪಗಳು, ದಕ್ಷಿಣ ಸುಡಾನ್, ತಜಕಿಸ್ತಾನ, ಟೊಂಗ, ತುರ್ಕ್​ಮೆನಿಸ್ತಾನ್, ಟುವಲು, ವಾನ್ವಾಟು ಹಾಗೂ ಯೆಮೆನ್.

ಈ 18 ದೇಶಗಳಲ್ಲಿ ಕೊರೋನಾ ಸೋಂಕು ದೃಢಪಡದೇ ಇರೋದಕ್ಕೆ ಹಲವು ಕಾರಣಗಳಿರಬಹುದು. ಉತ್ತರ ಕೊರಿಯಾದಂತಹ ದೇಶಗಳಲ್ಲಿ ಸೋಂಕು ದೃಢಪಟ್ಟರೂ ಅದನ್ನ ವರದಿ ಮಾಡಿರುವುದಿಲ್ಲ. ಇನ್ನು ಸಣ್ಣ ಸಣ್ಣ ದ್ವೀಪ ರಾಷ್ಟ್ರಗಳ ವಿಚಾರಕ್ಕೆ ಬಂದ್ರೆ, ಅಲ್ಲಿಗೆ ಪ್ರವಾಸಿಗರು ಹೋಗೋದು ತುಂಬಾ ವಿರಳ. ವಿಶ್ವಸಂಸ್ಥೆ ಪ್ರಕಾರ ಜಗತ್ತಿನಲ್ಲಿ ಅತಿ ಕಡಿಮೆ ಭೇಟಿ ನೀಡುವ ಟಾಪ್-10 ದ್ವೀಪಗಳಲ್ಲಿ 7 ದ್ವೀಪಗಳು ಕೊರೋನಾದಿಂದ ಮುಕ್ತವಾಗಿವೆ. ರಿಮೋಟ್​ ಪ್ಲೇಸ್ ಅಂದ್ಮೇಲೆ ಅಲ್ಲಿ ಸಾಮಾಜಿಕ ಅಂತರದ ಸಮಸ್ಯೆ ಇರುವುದಿಲ್ಲ. ಜೊತೆಗೆ ದ್ವೀಪರಾಷ್ಟ್ರಗಳು ಆಗಿರೋದ್ರಿಂದ ಒಂದ್​ರೀತಿ ಸೆಲ್ಫ್ ಐಸೋಲೇಷನ್​ಗೆ ಒಳಪಟ್ಟಿರುತ್ತವೆ.

-masthmagaa.com

Contact Us for Advertisement

Leave a Reply