ಮಧ್ಯಪ್ರದೇಶದಲ್ಲಿ ಸರ್ಕಾರದ ಉಳಿವಿಗೆ ಕಾಂಗ್ರೆಸ್ಸಿಗರಿಂದ ಶತ್ರುನಾಶ ಯಜ್ಞ..!

masthmagaa.com

ಮಧ್ಯಪ್ರದೇಶ: ಕಾಂಗ್ರೆಸ್​​ನ 22 ಶಾಸಕರ ರಾಜೀನಾಮೆಯಿಂದ ಮಧ್ಯಪ್ರದೇಶ ಸರ್ಕಾರ ಬೀಳುವ ಸ್ಥಿತಿಗೆ ಬಂದು ತಲುಪಿದೆ. ಈ ನಡುವೆ ಕಮಲ್ ನಾಥ್ ಸರ್ಕಾರದ ಸಚಿವರೊಬ್ಬರು ಶತ್ರುವಿನಾಶಕ ಯಜ್ಞವನ್ನು ನಡೆಸಿದ್ದಾರೆ. ಸರ್ಕಾರದ ಉಳಿವಿಗೆ ಮತ್ತು ಶತ್ರುಗಳ ನಾಶಕ್ಕೆ ಈ ಯಜ್ಞವನ್ನು ಮಾಡಿಸಿದ್ದಾರೆ. ಅಗರ್​​-ಮಾಲ್ವ ಜಿಲ್ಲೆಯಲ್ಲಿ ಸಚಿವ ಪಿಸಿ ಶರ್ಮಾ ಈ ಯಜ್ಞ ಮಾಡಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಧಾರ್ಮಿಕ ವ್ಯವಹಾರ ಮತ್ತು ಆಧ್ಯಾತ್ಮಿಕ ಇಲಾಖೆಯ ಮಂತ್ರಿಯಾಗಿರುವ ನಾನು ಜನರ ಕಲ್ಯಾಣಕ್ಕಾಗಿ ಬಂದಿದ್ದೇನೆ. ಜೊತೆಗೆ ನಮ್ಮ ಸರ್ಕಾರಕ್ಕೆ ಯಾವುದೇ ತೊಂದರೆಯಾಗಬಾರದು ಎಂದು ತಾಯಿ ಬಗ್ಲಾಮುಖಿ ದೇವಿಯ ಮಂದಿರದಲ್ಲಿ ಯಜ್ಞ ಮಾಡಿಸಿದ್ದೇನೆ. ಸದ್ಯ ನಾವು 121 ಸದಸ್ಯ ಬಲವನ್ನು ಹೊಂದಿದ್ದು, ವಿಶ್ವಾಸಮತಯಾಚನೆ ವೇಳೆ ಇನ್ನೂ ನಾಲ್ಕೈದು ಸದಸ್ಯರು ನಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

ನಿನ್ನೆ ಗೃಹಸಚಿವ ಬಾಲಾ ಬಚ್ಚನ್ ಸೇರಿದಂತೆ 80 ಮಂದಿ ಕಾಂಗ್ರೆಸ್ ಶಾಸಕರು ಸಿಕರ್​​ನಲ್ಲಿ ದೇವಾಲಯಕ್ಕೆ ತೆರಳಿ ಸರ್ಕಾರದ ಉಳಿವಿಗಾಗಿ ಪ್ರಾರ್ಥನೆ ಸಲ್ಲಿಸಿದ್ರು.

masthmagaa.com

Contact Us for Advertisement

Leave a Reply