ಅಸಾದುದ್ದೀನ್ ಓವೈಸಿ ಭರ್ಜರಿ ಡ್ಯಾನ್ಸ್​​..! ವಿಡಿಯೋ ವೈರಲ್…

ಮಹಾರಾಷ್ಟ್ರ: ಯಾವಾಗಲೂ ಬಿಜೆಪಿ ವಿರುದ್ಧ ಸಿಡಿ ಸಿಡಿ ಅನ್ಕೊಂಡು ಓಡಾಡ್ತಿದ್ದ ಎಐಎಂಐಎಂ ಪಕ್ಷದ ಮುಖಂಡ ಅಸಾದುದ್ದೀನ್ ಓವೈಸಿ ಭರ್ಜರಿಯಾಗಿ ಡ್ಯಾನ್ಸ್​ ಮಾಡಿದ್ದಾರೆ. ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಅವರು ಭಾಗಿಯಾಗಿದ್ರು. ಭಾಷಣ ಮುಗಿದ ಬಳಿಕ ಸ್ಟೇಜ್​ನಿಂದ ಕೆಳಗಿಳಿಯುತ್ತಿದ್ದ ವೇಳೆ ಡಿಜೆ ಸಾಂಗ್ ಹಾಕಲಾಯ್ತು. ಈ ವೇಳೆ ಅಸಾದುದ್ದೀನ್ ಓವೈಸಿ ಕೂಡ ಮೆಟ್ಟಿಲಿನಲ್ಲಿಯೇ ನಿಂತು ಡ್ಯಾನ್ಸ್ ಮಾಡಿದ್ದಾರೆ. ಈ ಕುರಿತ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ. ಯಾವಾಗಲೂ ಸೀರಿಯಸ್ಸಾಗಿಯೇ ಇರೋ ಅಸಾದುದ್ದೀನ್ ಓವೈಸಿ ಹೀಗೆ ಸಾರ್ವಜನಿಕ ಸ್ಥಳದಲ್ಲಿ ಡ್ಯಾನ್ಸ್ ಮಾಡಿದ್ದು ಇದೇ ಮೊದಲು ಎನ್ನಬಹುದು.

Contact Us for Advertisement

Leave a Reply