ಗಟ್ಟಿಯಾಯ್ತು ಉದ್ಧವ್ ಠಾಕ್ರೆ ಕುರ್ಚಿ ಕಾಲು..! ತಿಂಗಳೊಳಗೆ ಚುನಾವಣೆ

masthmagaa.com:

ಮಹಾರಾಷ್ಟ್ರ: ಸಿಎಂ ಉದ್ಧವ್ ಠಾಕ್ರೆ ಕುರ್ಚಿಗೆ ಎದುರಾಗಿದ್ದ ಕಂಟಕ ಈಗ ದೂರವಾಗಿದೆ. ಕೇಂದ್ರ ಚುನಾವಣಾ ಆಯೋಗ ವಿಧಾನಪರಿಷತ್​ ಚುನಾವಣೆಗೆ ನಡೆಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಸದ್ಯದಲ್ಲೇ ಅಧಿಸೂಚನೆ ಜಾರಿಯಾಗಲಿದ್ದು, ಮುಂದಿನ 21 ದಿನಗಳ ಒಳಗಾಗಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಮೇ 27ರ ಒಳಗಾಗಿ ಚುನಾವಣೆಯ ಎಲ್ಲಾ ಪ್ರಕ್ರಿಯೆಗಳು ಮುಗಿಯೋ ಸಾಧ್ಯತೆ ಇದೆ.

ಈ ಹಿಂದೆ ಉದ್ಧವ್ ಠಾಕ್ರೆ ಚುನಾವಣೆಯಲ್ಲಿ ಸ್ಪರ್ಧಿಸದೇ ಸಿಎಂ ಆಗಿ ಆಯ್ಕೆಯಾಗಿದ್ದರು. ಹೀಗಾಗಿ ಅವರು 6 ತಿಂಗಳ ಒಳಗಾಗಿ ವಿಧಾನಸಭೆ ಅಥವಾ ವಿಧಾನಪರಿಷತ್​​ಗೆ ಆಯ್ಕೆಯಾಗಬೇಕಿತ್ತು. ಆದ್ರೆ ಕೊರೋನಾ ಹಾವಳಿಯಿಂದಾಗಿ ಚುನಾವಣಾ ಆಯೋಗ ಚುನಾವಣೆಗೆ ಮುಂದಾಗಿರಲಿಲ್ಲ.. ಈ ಬಗ್ಗೆ ರಾಜ್ಯಪಾಲರಿಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದ್ರ ಬೆನ್ನಲ್ಲೆ ಸಿಎಂ ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆ ಮಾಡಿ ಮಾತನಾಡಿದ್ದರು.

ಇದ್ರ ಬೆನ್ನಲ್ಲೇ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿಯವರು ವಿಧಾನಪರಿಷತ್​​ಗೆ ಚುನಾವಣೆ ನಡೆಸುವಂತೆ ಕೇಂದ್ರ ಚುನಾವಣಾ  ಆಯೋಗಕ್ಕೆ ಮನವಿ ಮಾಡಿದ್ದರು. ಅದರಂತೆ ತಿಂಗಳೊಳಗಾಗಿ ವಿಧಾನಪರಿಷತ್​ನ ಖಾಲಿ ಇರುವ 9 ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.

-masthmagaa.com

 

Contact Us for Advertisement

Leave a Reply