masthmagaa.com:

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರ ಒಂದೊಂದೇ ಯಡವಟ್ಟುಗಳು ಬೆಳಕಿಗೆ ಬರ್ತಿದೆ. ಇದೀಗ ಸುಶಾಂತ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದ ಕೂಪರ್ ಆಸ್ಪತ್ರೆಯ ಶವಾಗಾರಕ್ಕೆ ರಿಹಾ ಚಕ್ರಬರ್ತಿ ಹೇಗೆ ಪ್ರವೇಶಿಸಿದ್ರು..? ಅವರಿಗೆ ಅನುಮತಿ ಕೊಟ್ಟಿದ್ಯಾರು..? ಎಂಬ ಪ್ರಶ್ನೆಗಳು ಎದ್ದಿವೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುಂಬೈನ ಕೂಪರ್ ಆಸ್ಪತ್ರೆ ಮತ್ತು ಮುಂಬೈ ಪೊಲೀಸರಿಗೆ ಮಹಾರಾಷ್ಟ್ರ ಮಾನವ ಹಕ್ಕುಗಳ ಆಯೋಗ ನೋಟಿಸ್ ನೀಡಿದೆ. ಜೊತೆಗೆ ಶವಾಗಾರಕ್ಕೆ ಪ್ರವೇಶಿಸಲು ರಿಹಾ ಚಕ್ರಬರ್ತಿಗೆ ಅನುಮತಿ ಕೊಟ್ಟಿದ್ದ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ.

ಅಂದ್ಹಾಗೆ ಜೂನ್ 24ರಂದು ಮುಂಬೈನ ನಿವಾಸದಲ್ಲಿ ಸುಶಾಂತ್ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎನ್ನಲಾಗ್ತಿದೆ. ಈ ಬಗ್ಗೆಯೂ ಅನುಮಾನ ಇದೆ. ಯಾಕಂದ್ರೆ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಬಗ್ಗೆ ಯಾವುದೇ ಫೋಟೋ ಅಥವಾ ವಿಡಿಯೋ ಲಭ್ಯವಿಲ್ಲ. ಅಲ್ಲದೆ ಪೊಲೀಸರ ಬದಲು ಸುಶಾಂತ್ ಸ್ನೇಹಿತರೇ ಮೃತದೇಹವನ್ನು ಕೆಳಗಿಳಿಸಿದ್ದರು ಎನ್ನಲಾಗಿದೆ.

ನಂತರ ಕೂಪರ್ ಆಸ್ಪತ್ರೆಗೆ ಮೃತದೇಹ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಆಸ್ಪತ್ರೆ ಬಳಿ ಕಾಣಿಸಿಕೊಂಡಿದ್ದ ರಿಹಾ ಚಕ್ರಬರ್ತಿ ಶವಾಗಾರಕ್ಕೆ ಹೋಗಿ ಸುಶಾಂತ್ ಮೃತದೇಹವನ್ನು ನೋಡಿದ್ದರು. ಹೀಗಾಗಿ ಶವಾಗಾರ ಪ್ರವೇಶಿಸಲು ರಿಹಾ ಚಕ್ರಬರ್ತಿಗೆ  ಅವಕಾಶ ನೀಡಿದ್ದರ ಬಗ್ಗೆ ಮಾನವ ಹಕ್ಕುಗಳ ಆಯೋಗ ಮಾಹಿತಿ ಕೇಳಿದೆ.

-masthmagaa.com

Contact Us for Advertisement

Leave a Reply