ಬಿಜೆಪಿಯಿಂದ ವಂಶ ರಾಜಕಾರಣ.. 19 ವಂಶವಾದಿಗಳಿಗೆ ಟಿಕೆಟ್!

ವಂಶಪಾರಂಪರ್ಯವನ್ನು ವಿರೋಧಿಸುವ ಬಿಜೆಪಿ ಮಹಾರಾಷ್ಟ್ರದಲ್ಲಿ ರಾಜಕಾರಣಿಗಳ ಮಕ್ಕಳಿಗೆ ಟಿಕೆಟ್ ಕೊಟ್ಟಿದೆ. ನಿನ್ನೆಯಷ್ಟೇ ಬಿಜೆಪಿ 125 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಚ್ಚರಿ ಅಂದ್ರೆ ಅವರಲ್ಲಿ 19 ಮಂದಿ ಬಿಜೆಪಿಯ ನಾಯಕರ ವಂಶಸ್ಥರು, ಸಂಬಂಧಿಕರೇ ಆಗಿದ್ದಾರೆ. ಅಂದ್ರೆ ಒಟ್ಟು ಅಭ್ಯರ್ಥಿಗಳ ಪೈಕಿ 6ರಲ್ಲಿ ಒಬ್ಬರು ಹಿರಿಯ ರಾಜಕಾರಣಿಗಳು ಕುಟುಂಬಸ್ಥರೇ ಆಗಿದ್ದಾರೆ.

ಪರಲೀ ವಿಧಾನಸಭೆ ಕ್ಷೇತ್ರದಿಂದ ಗೋಪಿನಾಥ್ ಮುಂಡೆ ಮಗಳು ಪಂಕಜಾ ಮುಂಡೆ, ಖಾಮ್‍ಗಾಂವ್ ಕ್ಷೇತ್ರದಿಂದ ಮಾಜಿ ಸಚಿವ ಭಾವೂ ಸಾಹೇಬ್ ಫುಂಡ್ಕರ್ ಪುತ್ರ ಆಕಾಶ್ ಫುಂಡ್ಕರ್, ಏರೋಲಿ ಕ್ಷೇತ್ರದಿಂದ ಮಾಜಿ ಸಚಿವ ಗಣೇಶ್ ನಾಯ್ಕ್ ಪುತ್ರ ಸಂದೀಪ್ ನಾಯಕ್ ಮತ್ತು ಅಕೋಲಾ ಕ್ಷೇತ್ರದಿಂದ ಮಾಜಿ ಸಚಿವ ಮಧುಕರ್ ಪಿಚಾಡ್ ಪುತ್ರ ವೈಭವ್ ಪಿಚಾಡ್ ಅವರಿಗೆ ಟಿಕೆಟ್ ನೀಡಲಾಗಿದೆ.

ನಾಗಪುರ ಕ್ಷೇತ್ರದಿಂದ ಮಾಜಿ ಸಚಿವ ಮಣಿ ಕಾರವ್ ಗಾವಿತ್ ಪುತ್ರ ಭರತ್ ಗಾವಿತ್, ಬೋಕರ್‍ದನ್ ಕ್ಷೇತ್ರದಿಂದ ಮಾಜಿ ಸಚಿವ ರಾವ್ ಸಾಹೇಬ್ ದಾನವೇ ಪುತ್ರ ಸಂತೋಷ್ ದಾನವೇಗೆ ಟಿಕೆಟ್ ನೀಡಲಾಗಿದೆ. ಇಷ್ಟೇ ಅಲ್ಲದೆ ಹಲವು ರಾಜಕೀಯ ನಾಯಕರ ಕುಟುಂಬಸ್ಥರಿಗೂ ಬಿಜೆಪಿ ಮಣೆ ಹಾಕಿದೆ. ಇದು ವಿಪಕ್ಷಗಳಿಗೆ ಹೊಸ ಅಸ್ತ್ರವನ್ನು ಕೊಟ್ಟಿದೆ.

Contact Us for Advertisement

Leave a Reply