ಕೊರೋನಾ ಕಾಟ: ನೆರೆಯ ದೇಶಗಳಿಗೆ ಬಾಗಿಲು ಮುಚ್ಚಿದ ಈಶಾನ್ಯದ ರಾಜ್ಯಗಳು..!

masthmagaa.com

ಕೊರೋನಾ ವೈರಸ್ ಭಾರತದಲ್ಲೂ ವೇಗವಾಗಿ ಹರಡುತ್ತಿದೆ. ಈಗಾಗಲೇ ಕೊರೋನಾ ವೈರಸ್ ಪೀಡಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ಹೀಗಾಗಿ ಈಶಾನ್ಯ ರಾಜ್ಯವಾದ ಮಣಿಪುರ ರಾಜ್ಯ ಸರ್ಕಾರ ಮಯನ್ಮಾರ್ ಜೊತೆಗೆ ಹಂಚಿಕೊಂಡಿರುವ ಗಡಿಮಾರ್ಗವನ್ನು ಬಂದ್ ಮಾಡಿದೆ. ಈ ಮೂಲಕ ಮಯನ್ಮಾರ್ ಮೂಲಕ ಭಾರತಕ್ಕೆ ವಿದೇಶಿಗರ ಆಗಮನಕ್ಕೆ ಬ್ರೇಕ್ ಹಾಕಿದೆ. ರಾಜ್ಯ ಗೃಹ ಇಲಾಖೆಯಿಂದ ಈ ಆದೇಶ ಹೊರಡಿಸಲಾಗಿದ್ದು, ಇಂಡೋ-ಮಯನ್ಮಾರ್ ಗಡಿಯಲ್ಲಿರೋ ಎಲ್ಲಾ ಗೇಟ್​​ಗಳನ್ನು ಬಂದ್ ಮಾಡಿದೆ.

ಮಣಿಪುರ ಮಾತ್ರವಲ್ಲ. ಮಿಝೋರಾಂ ಸರ್ಕಾರ ಕೂಡ ಮಯನ್ಮಾರ್ ಮತ್ತು ಬಾಂಗ್ಲಾದೇಶದ ಜೊತೆಗಿನ ಗಡಿಭಾಗದ ಎಲ್ಲಾ ಗೇಟ್​​ಗಳನ್ನು ಬಂದ್ ಮಾಡಿದೆ. ಇನ್ನು ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ಕೂಡ ರಾಜ್ಯಕ್ಕೆ ವಿದೇಶಿಗರು ಆಗಮಿಸದಂತೆ ಆದೇಶ ಹೊರಡಿಸಿದೆ.

ಅಸ್ಸಾಂಗೆ ಬಂದಿದ್ದ ಅಮೆರಿಕನ್ ಪ್ರವಾಸಿಗರಲ್ಲಿ ಕೊರೋನಾ ಸೋಂಕು ಕಂಡು ಬಂದಿರೋದ್ರಿಂದ ಅವರ ಜೊತೆ ಸಂಪರ್ಕದಲ್ಲಿದ್ದ 400ಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅಮೆರಿಕದ ಪ್ರವಾಸಿಗರು ಅಸ್ಸಾಂಗೆ ಬರುವ ಮುನ್ನ ಭೂತಾನ್​​ಗೆ ತೆರಳಿದ್ದರು. ಅಲ್ಲಿ ಪರೀಕ್ಷೆ ನಡೆಸಿದಾಗ ಅವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಇದೀಗ ಭೂತಾನ್ ಕೂಡ ವಿದೇಶಿಗರಿಗೆ ತನ್ನ ಬಾಗಿಲನ್ನು ಮುಚ್ಚಿದೆ.

-masthmagaa.com

Contact Us for Advertisement

Leave a Reply