masthmagaa.com:

ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನ ರದ್ದು ಮಾಡುವ ಸಂದರ್ಭದಲ್ಲಿ ಗೃಹ ಬಂಧನಕ್ಕೆ ಒಳಗಾಗಿದ್ದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದರು. ಆದ್ರೀಗ ಮತ್ತೆ ತಮ್ಮನ್ನ ಕಾನೂನುಬಾಹಿರವಾಗಿ ವಶಕ್ಕೆ ಪಡೆಯಲಾಗಿದೆ. ನನ್ನ ಮಗಳನ್ನ ಕೂಡ ಗೃಹ ಬಂಧನದಲ್ಲಿಡಲಾಗಿದೆ ಅಂತ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಬಿಜೆಪಿ ನಾಯಕರು ಮಾತ್ರ ಜಮ್ಮು-ಕಾಶ್ಮೀರದ ಯಾವುದೇ ಮೂಲೆಗೆ ಹೋಗಬಹುದು. ಅದೇ ನನ್ನ ವಿಚಾರದಲ್ಲಿ ಭದ್ರತಾ ಸಮಸ್ಯೆ ಅಂತ ನೆಪ ಕೊಡ್ತೀರಿ. ಕಳೆದ 2 ದಿನಗಳಿಂದ ಪಕ್ಷದ ನಾಯಕರೊಬ್ಬರ ಕುಟುಂಬವನ್ನ ಭೇಟಿಯಾಗಲು ಪುಲ್ವಾಮಾಕ್ಕೆ ಹೋಗಲು ಪ್ರಯತ್ನಿಸುತ್ತಿದ್ದೇನೆ. ಆದ್ರೆ ಅಧಿಕಾರಿಗಳು ಬಿಡುತ್ತಿಲ್ಲ. ಸುದ್ದಿಗೋಷ್ಠಿ ನಡೆಸೋಣ ಅಂದ್ರೆ ಮಾಧ್ಯಮದವರನ್ನ ಕೂಡ ನಮ್ಮ ಮನೆಗೆ ಬರಲು ಬಿಡ್ತಿಲ್ಲ ಅಂತ ಮೆಹಬೂಬಾ ಕಿಡಿಕಾರಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಕಾಶ್ಮೀರ ಪೊಲೀಸರು, ಮೆಹಬೂಬಾ ಮುಫ್ತಿ ಅವರು ಗೃಹ ಬಂಧನದಲ್ಲಿಲ್ಲ. ಭದ್ರತಾ ಕಾರಣ ಪುಲ್ವಾಮಾಕ್ಕೆ ಹೋಗದಂತೆ ಸೂಚಿಸಿದ್ದೇವೆ ಅಂತ ಹೇಳಿದ್ದಾರೆ. ಅಂದ್ಹಾಗೆ ನವೆಂಬರ್ 28ರಿಂದ ಡಿಸೆಂಬರ್ 19ರವರೆಗೆ ಒಟ್ಟು 8 ಹಂತಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿ (DDC) ಚುನಾವಣೆ ನಡೆಯಲಿದೆ. ಆರ್ಟಿಕಲ್ 370 ರದ್ದಾದ ಬಳಿಕ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಮೊದಲ ರಾಜಕೀಯ ಚಟುವಟಿಕೆ ಇದಾಗಿದೆ.

-masthmagaa.com

Contact Us for Advertisement

Leave a Reply