ಕಾನೂನು ವಿದ್ಯಾರ್ಥಿಯನ್ನು ಮನೆಯಲ್ಲೇ ಗುಂಡಿ ತೆಗೆದು ಹೂತಿದ್ಯಾರು..?

ಉತ್ತರ ಪ್ರದೇಶ: ಅಕ್ಟೋಬರ್ 9ರಂದು ನಾಪತ್ತೆಯಾಗಿದ್ದ ಕಾನೂನು ವಿದ್ಯಾರ್ಥಿಯೊಬ್ಬ ಹೆಣವಾಗಿ ಪತ್ತೆಯಾಗಿದ್ದಾನೆ. 30 ವರ್ಷದ ಪಂಕಜ್ ಸಿಂಹ ಮೃತ ದುರ್ದೈವಿ. ಘಾಜಿಯಾಬಾದ್​​ನಲ್ಲಿರೋ ಸಾಹಿಬಾಬಾದ್​​ ಬಳಿ ಈ ಘಟನೆ ನಡೆದಿದೆ. ಇಲ್ಲಿನ ಒಂದು ನಿರ್ಮಾಣ ಹಂತದ ಕಟ್ಟಡದ ಬೇಸ್​ಮೆಂಟ್​​ನಲ್ಲಿ ಶವವನ್ನು ಹೂಳಲಾಗಿತ್ತು. ಪೊಲೀಸರು ಸುಮಾರು 6 ಅಡಿ ಗುಂಡಿ ತೋಡಿ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.

ಪಂಕಜ್ ಸಿಂಹ ಮೃತದೇಹ ಅವರ ಮನೆ ಮಾಲೀಕರ ಮನೆಯಲ್ಲಿ ಪತ್ತೆಯಾಗಿದ್ದು, ಆರೋಪಿ ಹರಿಓಂ ಅಲಿಯಾಸ್ ಮುನ್ನ ಮತ್ತು ಅವರ ಕುಟುಂಬ ತಲೆಮರೆಸಿಕೊಂಡಿದೆ. ಪಂಕಜ್ ಓದೋದ್ರ ಜೊತೆಗೆ ಸೈಬಲ್ ಕೆಫೆ ನಡೆಸುತ್ತಾ, ಮಕ್ಕಳಿಗೆ ಟ್ಯೂಷನ್ ನೀಡುತ್ತಿದ್ದರು. ಆದ್ರೆ ಸೈಬರ್ ಮೇಲೆ ಕಣ್ಣು ಹಾಕಿದ್ದ ಮನೆ ಮಾಲೀಕ ಅದನ್ನು ಕಡಿಮೆ ಬೆಲೆಗೆ ಮಾರುವಂತೆ ಒತ್ತಡ ಹಾಕುತ್ತಿದ್ದ ಎನ್ನಲಾಗಿದೆ. ಸದ್ಯ ಮನೆ ಮಾಲೀಕ ಮುನ್ನಾಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Contact Us for Advertisement

Leave a Reply