ಬೀದರ್‌ ಮದರಸಾ ಗಲಾಟೆ! ವಿವಾದಕ್ಕೆ ಕಾರಣ ಏನು ಇಲ್ಲಿದೆ ನೋಡಿ ಸಂಪೂರ್ಣಮಾಹಿತಿ!

masthmagaa.com:

ದಸರಾ ಹಬ್ಬದ ಮೆರವಣಿಗೆ ವೇಳೆ ಹಿಂದೂ ಸಮುದಾಯದ ಜನರ ಗುಂಪೊಂದು ಮಸೀದಿ ಮದರಸಾಗೆ ಹೋಗಿ ಪೂಜೆ ಮಾಡಿರೊ ಘಟನೆ ಬೀದರ್‌ನಲ್ಲಿ ವಿವಾದಕ್ಕೆ ಕಾರಣ ಆಗಿದೆ. ಪುರಾತತ್ವ ಇಲಾಖೆ ರಕ್ಷಣೆಯಲ್ಲಿರೊ ಪಾರಂಪರಿಕ ಕಟ್ಟಡ ಮೊಹಮ್ಮದ್‌ ಗವಾನ್‌ ಮದರಸಾದಲ್ಲಿ ಈ ಘಟನೆ ನಡೆದಿದೆ. ಪ್ರತಿ ವರ್ಷ ನವರಾತ್ರಿಯ ಮೆರವಣಿಗೆ ವೇಳೆ ಇಲ್ಲಿನ ಹಿಂದೂ ಜನ ಮೊಹಮ್ಮದ್‌ ಗವಾನ್‌ ಮದರಸಾ ಹೊರಗಡೆ ದೇವಿಗೆ ಪೂಜೆ ಸಲ್ಲಿಸುತ್ತಿದ್ರು. ಆದ್ರೆ ಈ ಬಾರಿ ನೇರವಾಗಿ ಮದರಸಾದ ಒಳಗೆ ನುಗ್ಗಿ ಜೈ ಭವಾನಿ, ವಂದೇ ಮಾತರಂ, ಹಿಂದೂ ಧರ್ಮ ಕೀ ಜೈ ಅಂತೆಲ್ಲಾ ಘೋಷಣೆಗಳನ್ನ ಕೂಗಿ ಪೂಜೆ ಮಾಡಿದ್ದಾರೆ ಅಂತ ಆರೋಪಿಸಿ ಮುಸ್ಲಿಂ ಕಡೆಯವರು ಪೊಲೀಸ್‌ ದೂರು ದಾಖಲಿಸಿದ್ದಾರೆ. ಮದರಸಾದ ಬೀಗ ಮುರಿದು, ಸೆಕ್ಯೂರಿಟಿ ಮೇಲೆ ಹಲ್ಲೆ ಮಾಡೋಕೆ ಯತ್ನ ಮಾಡಿ, ಸಮಾಜದಲ್ಲಿ ಶಾಂತಿ ಕೆದಡೋಕೆ ಪ್ರಯತ್ನಿಸಿದ್ದಾರೆ, ಮುಸ್ಲಿಂ ವಿರೋಧಿ ಘೋಷಣೆಗಳನ್ನ ಕೂಗಲಾಗಿದೆ. ಮದರಸಾದಲ್ಲಿ ಕಸವನ್ನ ತಂದು ಹಾಕಲಾಗಿದೆ ಅಂತ ಆರೋಪಿಸಿದ್ದಾರೆ. ಈ ಕಂಪ್ಲೇಟ್‌ ಆಧಾರದ ಮೇಲೆ ಪೊಲೀಸರಿ ಈಗಾಗಲೇ 9 ಜನರ ವಿರುದ್ದ FIR ದಾಖಲಿಸಿದ್ದಾರೆ. ಹಾಗೂ ನಾಲ್ವರನ್ನ ಅರೆಸ್ಟ್‌ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಮದರಸಾ ಮುಂದೆ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಇನ್ನು ಘಟನೆ ಬಗ್ಗೆ AIMIMನ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಪ್ರತಿಕ್ರಿಯಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಇಂತಹ ಕೃತ್ಯಗಳು ನಡೆಯೋಕೆ ಹೇಗೆ ಅನುಮತಿ ಕೊಡ್ತೀರಿ, ಮುಸ್ಲಿಂರಿಗೆ ಹಾನಿ ಮಾಡೋಕಾಗಿನೇ ಬಿಜೆಪಿ ಇಂತಹ ಕ್ರಮಗಳನ್ನ ಉತ್ತೇಜಿಸುತ್ತೆ ಅಂತ ಕಿಡಿಕಾರಿದ್ದಾರೆ. ಇನ್ನೊಂದ್‌ ಕಡೆ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯಿಸಿ, ಮೊಹಮ್ಮದ್‌ ಗವಾನ್‌ ಮದರಸಾದಲ್ಲಿರೊ ಲಕ್ಷ್ಮೀ ದೇವಸ್ಥಾನಕ್ಕೆ ಪೂಜೆ ಮಾಡೊ ಪ್ರತೀತಿ ಮೊದಲಿನಿಂದನೂ ಇದೆ. ಆದ್ರೆ ಇತ್ತೀಚೆಗೆ ಮತಾಂದ ಮುಸ್ಲಿಂರು ಪೂಜೆಗೆ ಅವಕಾಶ ಕೊಡ್ತಿಲ್ಲ ಅಂತ ಹೇಳಿದ್ದಾರೆ. ಜೊತೆಗೆ ಹಿಂದಿನ ಸಂಪ್ರದಾಯ ಮುಂದುವರಿಬೇಕು. ಮುಸ್ಲಿಂರನ್ನ ಮದರಸಾದಿಂದ ಹೊರ ಹಾಕಬೇಕು. ಮೊದಲಿನಂತೆ ಅವಕಾಶ ನೀಡದೇ ಇದ್ರೆ ದೊಡ್ಡ ಮಟ್ಟದ ಹೋರಾಟ ನಡೆಸ್ತೇವೆ ಅಂತ ಎಚ್ಚರಿಕೆ ನೀಡಿದ್ದಾರೆ. ಅಂದಹಾಗೆ ನಿಜಾಮರ ಕಾಲದಿಂದಲೂ ಹಿಂದೂಗಳು ಮದರಸಾದಲ್ಲಿ ದಸರಾ ವೇಳೆ ಪೂಜೆ ಮಾಡ್ತಾ ಬಂದಿದಾರೆ. ಪ್ರತಿ ವರ್ಷ ಇಬ್ಬರು ಅಥ್ವಾ 4 ಜನ ಮಾತ್ರ ಹೋಗಿ ಮದರಾಸದಲ್ಲಿರೊ ಮಿನಾರ್‌ಗೆ ಪೂಜೆ ಸಲ್ಲಿಸಿ ಬರ್ತಿದ್ರು. ಮುಸ್ಲಿಂರು ಕೂಡ ಯಾವುದೇ ವಿರೋಧ ಮಾಡ್ತಿದ್ದಿಲ್ಲ ಅಂತ SP ಡೆಕ್ಕಾ ಕಿಶೋರ್‌ ಬಾಬು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply