masthmagaa.com:

ಕೊರೋನಾ ವೈರಸ್​​ಗೆ ಅಮೆರಿಕದ ಮೊಡೆರ್ನಾ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಗೆ ರೇಟ್ ಫಿಕ್ಸ್ ಆಗಿದೆ. ಒಂದು ಡೋಸ್​ಗೆ 25 ಡಾಲರ್​ನಿಂದ 37 ಡಾಲರ್ ಅಂತ ಕಂಪನಿಯ ಸಿಇಒ ಸ್ಟೀಫನ್ ಬ್ಯಾನ್ಸೆಲ್ ಹೇಳಿದ್ದಾರೆ. ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ 1,800 ರೂಪಾಯಿಯಿಂದ 2,800 ರೂಪಾಯಿ ಆಗುತ್ತೆ. ಇದು ಸರ್ಕಾರಗಳಿಗೆ ಕಂಪನಿ ನಿಗದಿಪಡಿಸಿರುವ ದರ. ಯಾವ ದೇಶ ಎಷ್ಟು ಪ್ರಮಾಣದಲ್ಲಿ ಲಸಿಕೆಗೆ ಆರ್ಡರ್ ಕೊಡುತ್ತೋ ಅದರ ಮೇಲೆ ಈ ರೇಟು ನಿಗದಿಯಾಗುತ್ತೆ ಅಂತ ಕಂಪನಿ ಹೇಳಿದೆ. ಮೊಡೆರ್ನಾ ಲಸಿಕೆ 94.5% ಪರಿಣಾಮಕಾರಿ ಅಂತ ಇತ್ತೀಚೆಗೆ ಕಂಪನಿ ಘೋಷಿಸಿಕೊಂಡಿತ್ತು.

ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಮೂರನೇ ಹಂತದ ಮಾನವ ಪ್ರಯೋಗ ನಡೆಸುತ್ತಿರುವ ಆಕ್ಸ್​ಫರ್ಡ್​-ಆಸ್ಟ್ರಾಝೆನೆಕಾ ಲಸಿಕೆಯ ಎರಡು ಡೋಸ್​ಗೆ 1,000 ರೂಪಾಯಿ ಅಥವಾ ಅದಕ್ಕಿಂತಲೂ ಕಮ್ಮಿಯಾಗಬಹುದು ಅಂತ ಇತ್ತೀಚೆಗೆ ಪುಣೆ ಮೂಲದ ಸೀರಂ ಇನ್​ಸ್ಟಿಟ್ಯೂಟ್​ ಹೇಳಿತ್ತು. ಇದನ್ನ ನೋಡಿದ್ರೆ ಆಕ್ಸ್​ಫರ್ಡ್​ ಲಸಿಕೆಗಿಂತ ಮೊಡೆರ್ನಾ ಲಸಿಕೆ ಸ್ವಲ್ಪ ದುಬಾರಿ ಅನಿಸುತ್ತೆ. ಆದ್ರೆ ಕೆಲವೊಂದು ದೇಶಗಳಲ್ಲಿ ಲಸಿಕೆಯನ್ನ ಉಚಿತವಾಗಿ ನೀಡಲು ಸರ್ಕಾರಗಳು ಚಿಂತನೆ ನಡೆಸಿವೆ. ಸೋ ಹಣವನ್ನ ಸರ್ಕಾರ ಆಯಾ ಕಂಪನಿಗೆ ಕೊಡುತ್ತೆ. ಜನಸಾಮಾನ್ಯರ ಮೇಲೆ ಯಾವುದೇ ಹೊರೆ ಬೀಳಲ್ಲ.

-masthmagaa.com

Contact Us for Advertisement

Leave a Reply