ಕೊರೋನಾ: ಚೀನಾದಲ್ಲಿ 3,000 ಜನ ಬಲಿ, ಇಟಲಿಯಲ್ಲಿ ಶಾಲಾ-ಕಾಲೇಜು ಬಂದ್​

masthmagaa.com:

ಕಳೆದ ಡಿಸೆಂಬರ್​ನಲ್ಲಿ ವುಹಾನ್​ನಲ್ಲಿ ಕಾಣಿಸಿಕೊಂಡ ಕೊರೋನಾ ಮಹಾಮಾರಿಗೆ ಚೀನಾದಲ್ಲಿ ಮೃತಪಟ್ಟವರ ಸಂಖ್ಯೆ 3,000 ಗಡಿ ದಾಟಿದೆ. ಹಾಂಗ್​ಕಾಂಗ್​ ಹಾಗೂ ತೈವಾನ್ ಸೇರಿದಂತೆ ಚೀನಾದಲ್ಲಿ ಇದುವರೆಗೆ 3,015 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಜೊತೆಗೆ 80 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದ್ದು, 50 ಸಾವಿರಕ್ಕೂ ಹೆಚ್ಚು ಜನ ಗುಣಮುಖರಾಗಿದ್ದಾರೆ.

ಇನ್ನು ಇಟಲಿಯಲ್ಲಿ 3,000ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದ್ದು, ಮಾರ್ಚ್​ 15ರವರೆಗೆ ದೇಶಾದ್ಯಂತ ಶಾಲಾ-ಕಾಲೇಜುಗಳನ್ನ ಬಂದ್ ಮಾಡಲಾಗಿದೆ.

ಇರಾನ್​ನಲ್ಲಿ ಮಹಾಮಾರಿಗೆ 92 ಜನ ಮೃತಪಟ್ಟಿದ್ದು, ಶೇಕಡಾ 8ರಷ್ಟು ಜನಪ್ರತಿನಿಧಿಗಳಲ್ಲಿ ಸೋಂಕು ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ.

ದಕ್ಷಿಣ ಕೊರಿಯಾದಲ್ಲಿ 5,700 ಜನರಿಗೆ ಕೊರೋನಾ ವೈರಸ್ ತಗುಲಿದ್ದು, ಇದುವರೆಗೆ 35 ಮಂದಿ ಮೃತಪಟ್ಟಿದ್ದಾರೆ.

ಅಮೆರಿಕದ ‘ದಿ ಗ್ರಾಂಡ್​ ಪ್ರಿನ್ಸೆಸ್​’ ಹಡಗಿನಲ್ಲಿದ್ದ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಮತ್ತೊಬ್ಬರಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ ಕ್ಯಾಲಿಫೋರ್ನಿಯಾದ ಬಂದರಿನಲ್ಲಿ ಹಡಗನ್ನು ನಿಲ್ಲಿಸಲಾಗಿದ್ದು ಪ್ರಯಾಣಿಕರನ್ನು ಸ್ಕ್ರೀನಿಂಗ್​ಗೆ ಒಳಪಡಿಸಲಾಗುತ್ತಿದೆ.

-masthmagaa.com

Contact Us for Advertisement

Leave a Reply