ಹೀಗೂ ಸಾವು ಬರುತ್ತಾ..? ಛೇ..ಪಾಪ ನೋಡಿ…

ಮಧ್ಯಪ್ರದೇಶ: ಸಾವು ಯಾವಾಗ ಬರುತ್ತೆ..? ಹೇಗೆ ಬರುತ್ತೆ ಅನ್ನೋದು ಯಾರಿಗೂ ಗೊತ್ತಾಗಲ್ಲ. ಆದ್ರೆ ಮಧ್ಯಪ್ರದೇಶದಲ್ಲಿ ಬ್ಯಾಂಕ್ ಮ್ಯಾನೇಜರ್ ಒಬ್ಬರ ಸಾವು ಮಾತ್ರ ಪ್ರತಿಯೊಬ್ಬರ ರೋಮ ಎದ್ದು ನಿಲ್ಲುವಂತೆ ಮಾಡಿದೆ. ಬ್ಯಂಕರ್ ಮ್ಯಾನೇಜರ್ ಒಬ್ಬರು ತಮ್ಮ ಕಾರ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ಮೇಲಿಂದ ಬಿದ್ದ ಕಲ್ಲೊಂದು ಕಾರ್​ನ ಮೇಲ್ಭಾಗ ಸೀಳಿಕೊಂಡು ಬಂದು ಮ್ಯಾನೇಜರ್ ತಲೆಗೆ ಬಡಿದಿದೆ. ಅದು ಎಷ್ಟು ವೇಗವಾಗಿತ್ತೆಂದರೆ ಬ್ಯಾಂಕ್ ಮ್ಯಾನೇಜರ್ ಅಶೋಕ್ ವರ್ಮಾ ತಲೆ ಒಡೆದುಹೋಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರ ಜೊತೆ ಇಬ್ಬರು ಸಹೋದ್ಯೋಗಿಗಳು ಕೂಡ ಇದ್ದರು. ಇವರು ಬೈತೂಲ್​-ನಾಗ್ಪುರ ಹೈವೇಯಲ್ಲಿ ತೆರಳುವಾಗ ಈ ಘಟನೆ ನಡೆದಿದೆ.

ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಅಶೋಕ್ ವರ್ಮಾ ಮೃತದೇಹವನ್ನು ಮರಣೊತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೆ ಘಟನೆ ಕುರಿತು ಪ್ರತಿಕ್ರಿಯಿಸಿ, ಘಟನಾ ಸ್ಥಳಕ್ಕೆ ಹತ್ತಿರದಲ್ಲೇ ಒಂದು ಸ್ಟೋನ್ ಕ್ರಶರ್ ಇದೆ. ಅಲ್ಲಿ ಬ್ಲಾಸ್ಟಿಂಗ್​​​ನಿಂದಾಗಿ ಕಲ್ಲು ಹಾರಿ ಬಂದು ಅಲೋಕ್ ವರ್ಮಾಗೆ ಬಡಿದಿದೆ ಎಂದಿದ್ದಾರೆ.

ಸದ್ಯ ತನಿಖೆ ಆರಂಭಿಸಿರುವ ಪೊಲೀಸರು ಸ್ಟೋನ್ ಕ್ರಶರ್​​​ ಸೀಲ್ ಮಾಡಿದ್ದಾರೆ. ಜೊತೆಗೆ ಈಗ ಹೈವೇಗೆ ಇಷ್ಟು ಹತ್ತಿರದಲ್ಲಿ ಸ್ಟೋನ್ ಕ್ರಶರ್ ಕೇಂದ್ರಕ್ಕೆ ಅನುಮತಿ ಕೊಟ್ಟಿದ್ದರು ಯಾರು..? ಈ ಹಿಂದೆಯೇ ಪೊಲೀಸರು ಇದನ್ನು ಸೀಲ್ ಮಾಡಲಿಲ್ಲ ಯಾಕೆ ಎಂದು ಪ್ರಶ್ನೆಗಳು ಎದ್ದಿವೆ.

Contact Us for Advertisement

Leave a Reply