27ರ ಯುವತಿಯ ಅಶ್ಲೀಲ ವಿಡಿಯೋ ಮಾಡಿ 3 ವರ್ಷ ರೇಪ್ ಮಾಡಿದ 58ರ ವೈದ್ಯ

ಮಹಾರಾಷ್ಟ್ರ: ವೈದ್ಯೋ ನಾರಾಯಣ ಹರಿ ಅಂತಾರೆ. ಆದ್ರೆ ಮುಂಬೈನಲ್ಲೊಬ್ಬ 58  ವರ್ಷದ ಮುದಿ ವೈದ್ಯ ತನ್ನ ಪೇಷೆಂಟ್​​ನ ಅಶ್ಲೀಲ ವಿಡಿಯೋ ಮಾಡಿ ದೌರ್ಜನ್ಯ ಎಸಗಿದ್ದಾನೆ. 2015ರಲ್ಲಿ 27 ವರ್ಷದ ಯುವತಿಯೊಬ್ಬರು  ಚಿಕಿತ್ಸೆಗಾಗಿ ವೈದ್ಯರ ಬಳಿ ಹೋಗಿದ್ದರು. ಈ ವೇಳೆ ಚಿಕಿತ್ಸೆ ನೆಪದಲ್ಲಿ ಇಂಜೆಕ್ಷನ್ ಕೊಟ್ಟಿದ್ದರಿಂದ ಯುವತಿ ತಲೆ ತಿರುಗಿ ಬಿದ್ದಿದ್ದರು. ಈ ವೇಳೆ ವೈದ್ಯ ಅಶ್ಲೀಲ ವಿಡಿಯೋ ಮಾಡಿದ್ದ. ನಂತರ ಆ ವಿಡಿಯೋವನ್ನು ಯುವತಿಗೆ ತೋರಿಸಿ, ಬ್ಲಾಕ್​ ಮೇಲ್ ಮಾಡಿದ್ದಾನೆ. ಈ ವಿಡಿಯೋವನ್ನು ಸಾರ್ವಜನಿಕಗೊಳಿಸುತ್ತೇನೆ ಎಂದು ಬೆದರಿಸುತ್ತಲೇ 3 ವರ್ಷಗಳ ಕಾಲ ಅತ್ಯಾಚಾರ ಎಸಗಿದ್ದಾನೆ.

2018ರಲ್ಲಿ ಯುವತಿಗೆ ಮದುವೆಯಾದರೂ ಬ್ಲಾಕ್ ಮೇಲ್ ಮಾಡೋದನ್ನು ಮುಂದುವರಿಸಿದ್ದ. ಆದ್ರೆ ಯುವತಿ ನಿರಾಕರಿಸಿದಾಗ ಡಾಕ್ಟರ್ ಆ ವಿಡಿಯೋವನ್ನು ಆನ್​ಲೈನ್ ವೆಬ್​ಸೈಟ್​ವೊಂದಕ್ಕೆ ಪೋಸ್ಟ್​ ಮಾಡಿದ್ದಾನೆ. ಆದ್ರೆ ಒಂದು ದಿನ ಈ ವಿಡಿಯೋವನ್ನು ಆಕೆಯ ಪತಿ ನೋಡಿದ್ದಾರೆ. ಇದಾದ ಬಳಿಕ ಮಹಿಳೆ ತನ್ನ ಪತಿಗೆ ಎಲ್ಲವನ್ನೂ ಹೇಳಿಕೊಂಡಿದ್ದಾರೆ. ಆಗ ಪೊಲೀಸ್ ಸ್ಟೇಷನ್​ಗೆ ತೆರಳಿದ ದಂಪತಿ ವೈದ್ಯರ ವಿರುದ್ಧ ದಾಖಲಿಸಿದ್ದಾರೆ. ಸದ್ಯ ಆರೋಪಿ ವೈದ್ಯನನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Contact Us for Advertisement

Leave a Reply