ಮಯನ್ಮಾರ್‌ ಸೇನೆಗೆ ಶುರುವಾಯ್ತು ಢವಢವ!

masthmagaa.com:

ಮಯನ್ಮಾರ್​ನಲ್ಲಿ ಸೇನೆಯ ಮೇಲೆ ಅಧಿಕಾರ ಬಿಟ್ಟು ತೊಲಗುವಂತೆ ಒತ್ತಡ ವಿಪರೀತ ಹೆಚ್ಚಾಗ್ತಿದೆ. ದೇಶದ ಒಳಗೂ ಹೊರಗೂ ಸರ್ವ ದಿಕ್ಕುಗಳಿಂದಲೂ ಸೇನೆಯ ಮೇಲೆ ಪ್ರಹಾರ ನಡೀತಿದೆ. ಯುರೋಪಿಯನ್ ಯೂನಿಯನ್​ ಮಯನ್ಮಾರ್​ ಮೇಲೆ ಹಲವು ನಿರ್ಬಂಧಗಳನ್ನ ಅನೌನ್ಸ್ ಮಾಡಿದ ಬೆನ್ನಲ್ಲೇ ಅಮೆರಿಕ ಕೂಡ ಇನ್ನಷ್ಟು ಹೊಸ ಸ್ಯಾಂಕ್ಷನ್ಸ್ ಅಥವಾ ನಿರ್ಬಂಧಗಳನ್ನ ಅನೌನ್ಸ್ ಮಾಡಿದೆ. ಮಯನ್ಮಾರ್​ ಸೇನೆಯ ವಾಯುಪಡೆ ಮುಖ್ಯಸ್ಥ ಮೋಯೆ ಮಿಂಟ್ ಟುನ್ ಸೇರಿ ಇನ್ನೂ ಹಲವರ ವಿರುದ್ಧ ಅಮೆರಿಕ ನಿರ್ಬಂಧ ಜಾರಿ ಮಾಡಿದೆ. ಈ ಕೂಡಲೇ ಸೇನೆ ಜನರನ್ನ ಹತ್ತಿಕ್ಕೋದು, ಹಿಂಸಿಸೋದು ನಿಲ್ಲಿಸಬೇಕು. ಇಲ್ಲದೇ ಹೋದರೆ ಮತ್ತಷ್ಟು ಕಠಿಣ ಕ್ರಮಗಳನ್ನ ಕೈಗೊಳ್ಳಲು ನಾವು ಹಿಂಜರಿಯೋದಿಲ್ಲ ಅಂತ ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಆಂಟನಿ ಬ್ಲಿಂಕನ್ ಹೇಳಿದ್ದಾರೆ.

ಈ ಮೂಲಕ ಅಗತ್ಯಬಿದ್ದರೆ ಮತ್ತಷ್ಟು ಕಠಿಣ ಕ್ರಮ ಹಾಗೂ ಸೇನಾ ಕ್ರಮಗಳಿಗೂ ತಾನು ಹಿಂಜರಿಯಲ್ಲ ಅಂತ ಅಮೆರಿಕ ಎಚ್ಚರಿಸಿದೆ. ಮತ್ತೊಂದುಕಡೆ ದೇಶದ ಒಳಗೂ ಜನ ಈ ಸಲ ಸೇನೆಗೆ ಹೆದರುತ್ತಿಲ್ಲ. ಇದುವರೆಗೆ ಸೇನೆ ಮೂವರು ಪ್ರತಿಭಟನಾಕಾರರನ್ನ ಗುಂಡಿಕ್ಕಿ ಹತ್ಯೆ ಮಾಡಿದೆ. ಕಣ್ಣುರಿ ತರಿಸುವ ಗ್ಯಾಸ್ ಪ್ರಯೋಗ ಮಾಡ್ತಿದಾರೆ. ಜಲಫಿರಂಗಿ, ರಬ್ಬರ್ ಬುಲೆಟ್​ಗಳನ್ನೂ ಬಳಸ್ತಿದಾರೆ. ಆದ್ರೆ ಜನ ಒಂಚೂರೂ ಕೇರ್ ಮಾಡದೆ ಅಧಿಕಾರ ಬಿಟ್ಟು ತೊಲಗುವಂತೆ ಮಯನ್ಮಾರ್​ ಸೇನೆ ವಿರುದ್ಧ ದಂಗೆ ಎದ್ದಿದ್ದಾರೆ. ಇದರ ಪರಿಣಾಮ ಸೇನೆ ಕಂಗೆಟ್ಟು ಹೋಗಿದೆ. ರಾಜಧಾನಿ ನ್ಯಾಪಿಡಾವ್, ಅತಿ ದೊಡ್ಡ ನಗರ ಯಾಂಗೋನ್ ಸೇರಿ ಆಯಕಟ್ಟಿನ ಸ್ಥಳಗಳಲ್ಲಿ ಸೇನಾ ಜಮಾವಣೆಯನ್ನ ಹೆಚ್ಚು ಮಾಡಿದೆ. ಈ ಮೂಲಕ ಮಯನ್ಮಾರ್​​ನಲ್ಲಿ ಪರಿಸ್ಥಿತಿ ಯಾವುದೇ ಕ್ಷಣದಲ್ಲಿ ವಿಕೋಪಕ್ಕೆ ಹೋಗೋ ಲಕ್ಷಣ ಕಾಣಿಸ್ತಿದೆ.

-masthmagaaa.com

Contact Us for Advertisement

Leave a Reply