ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಚುನಾವಣೆ ಮತ್ತೆ ಮುಂದೂಡಿಕೆ!

masthmagaa.com:

ಇವತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೀತು. ಕಳೆದ ವಿಧಾನಸಭೆ ಚುನಾವಣೆಗಳಲ್ಲಾದ ಸೋಲಿನ ಬಗ್ಗೆ ಪರಾಮರ್ಶೆ ನಡೀತು. ಬಳಿಕ ಕಾಂಗ್ರೆಸ್​​ ನಾಯಕತ್ವದ ವಿಚಾರ ಚರ್ಚೆಗೆ ಬಂತು.. ಈ ಹಿಂದೆ ಜೂನ್ 23ರಂದು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು ಮತ್ತು ಜೂನ್ 7ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ ಅಂತೆಲ್ಲಾ ನಿಗದಿಪಡಿಸಲಾಗಿತ್ತು. ಆದ್ರೆ ಇಂದಿನ ಸಭೆಯಲ್ಲಿ ಕೊರೋನಾ ನೆಪವೊಡ್ಡಿ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯನ್ನು ಮುಂದೂಡಲು ನಿರ್ಧರಿಸಲಾಗಿದೆ. ಅಂದಹಾಗೆ 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ರು. ಅದಾದ ಬಳಿಕ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷೆಯಾಗಿದ್ದಾರೆ. ಫುಲ್​ಟೈಂ, ಆಕ್ಟಿವ್ ಅಧ್ಯಕ್ಷರ ಆಯ್ಕೆಗೆ ಪಕ್ಷದಲ್ಲಿ ಒತ್ತಾಯ ಕೇಳಿ ಬರುತ್ತಲೇ ಇದೆ. ಕಳೆದ ಆಗಸ್ಟ್​​ನಲ್ಲಿ ಎಲೆಕ್ಷನ್​​​ಗೆ ನಿರ್ಧರಿಸಲಾಗಿತ್ತು. ಆದ್ರೆ ಕಾಯರ್ಕಾರಿ ಸಮಿತಿಯಲ್ಲಿ ಸೋನಿಯಾ ಗಾಂಧಿಯವರೇ ಅಧ್ಯಕ್ಷರಾಗಿ ಮುಂದುವರಿಯಬೇಕು ಅಂತ ಒತ್ತಾಯ ಕೇಳಿ ಬಂದಿತ್ತು. ನಂತರ ಫೆಬ್ರವರಿಯಲ್ಲಿ ಎಲೆಕ್ಷನ್ ನಡೆಸೋಣ ಅಂದ್ರೆ ಪಂಚರಾಜ್ಯಗಳ ಚುನಾವಣೆ ಇದ್ಯಲ್ವಾ ಅದು ಮುಗೀಲಿ.. ಆಮೇಲೆ ಅಧ್ಯಕ್ಷರ ಬದಲಾವಣೆ ಮಾಡಿದ್ರಾಯ್ತು ಅಂತ ಮುಂದೂಡಲಾಗಿತ್ತು. ಇದೀಗ ಕೊರೋನಾ ನೆಪವೊಡ್ಡಿ ಪಕ್ಷದ ಅಧ್ಯಕ್ಷರ ಆಯ್ಕೆ ಚುನಾವಣೆ ಮುಂದೂಡಲಾಗಿದೆ.

-masthmagaa.com

Contact Us for Advertisement

Leave a Reply