FDI ನಿಯಮ ಚೇಂಜ್: ಉರಿದುಬಿದ್ದ ಚೀನಾಗೆ ನಯವಾಗಿ ಡಿಚ್ಚಿಕೊಟ್ಟ ಭಾರತ..!

masthmagaa.com:

ದೆಹಲಿ: ವಿದೇಶಿ ನೇರ ಬಂಡವಾಳ ಹೂಡಿಕೆಯ ನಿಯಮಗಳನ್ನು ಬದಲಾಯಿಸಿದ್ದಕ್ಕೆ ಕಿಡಿಕಾರಿದ್ದ ಚೀನಾಗೆ ಭಾರತ ಉತ್ತರ ನೀಡಿದೆ. ಭಾರತ ಕೇವಲ ವಿದೇಶಿ ನೇರ ಬಂಡವಾಳ ಹೂಡಿಕೆಯ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಭಾರತದಲ್ಲಿ ಹೂಡಿಕೆ ಮಾಡಲು ಬಯಸುವ ನೆರೆಹೊರೆಯ ದೇಶಗಳಿಗೆ ಅನುಮತಿ ನಿರಾಕರಿಸಿಲ್ಲ.. ಕೇವಲ ಅನುಮೋದನೆ ಪಡೆಯೋದನ್ನು ಕಡ್ಡಾಯಗೊಳಿಸಿದ್ದೇವೆ ಅಷ್ಟೆ… ಇದರಿಂದ ವಿಶ್ವ ವ್ಯಾಪಾರ ಸಂಸ್ಥೆಯ ಯಾವುದೇ ನಿಯಮಗಳು ಉಲ್ಲಂಘನೆಯಾಗಿಲ್ಲ ಎಂದು ಹೇಳಿದೆ.

ಕೊರೋನಾ ವಿರುದ್ಧ ಹೋರಾಟದ ಈ ಕಠಿಣ ಸಂದರ್ಭವನ್ನೇ ನೋಡಿಕೊಂಡು ಚೀನಾ ವಿವಿಧ ದೇಶಗಳಲ್ಲಿ ನೇರ ಬಂಡವಾಳ ಹೂಡಿಕೆ ಮಾಡಿ, ವಿವಿಧ ದೇಶಗಳ ಆರ್ಥಿಕತೆಗೆ ನೇರವಾಗಿ ಎಂಟ್ರಿ ಕೊಡೋ ಪ್ಲಾನ್ ಮಾಡ್ತಿದೆ. ಅದೇ ರೀತಿ ಇತ್ತೀಚೆಗಷ್ಟೇ HDFC ಬ್ಯಾಂಕ್​​​ನ ಷೇರುಗಳನ್ನು ಖರೀದಿಸಿತ್ತು.

ಹೀಗಾಗಿ ಭಾರತ ಸರ್ಕಾರ ನೇರ ಬಂಡವಾಳ ಹೂಡಿಕೆಯ ನಿಯಮದಲ್ಲೇ ಬದಲಾವಣೆ ಮಾಡಿ ಚೀನಾಗೆ ಸಖತ್ತಾಗೇ ಗುನ್ನ ಇಟ್ಟಿತ್ತು. ಈ ಬದಲಾವಣೆಯಿಂದ ಭಾರತದ ಜೊತೆಗೆ ಭೂಗಡಿ ಹೊಂದಿರುವ ರಾಷ್ಟ್ರಗಳು ಇಲ್ಲಿ ಹೂಡಿಕೆ ಮಾಡುವುದಕ್ಕೂ ಮುನ್ನ ಭಾರತ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ.

ಆದ್ರೆ ಭಾರತದ ಕ್ರಮಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿದ್ದು, ಇದು ವಿಶ್ವ ವ್ಯಾಪಾರ ಸಂಸ್ಥೆಯ ತಾರತಮ್ಯ ರಹಿತ ವ್ಯಾಪಾರ ನೀತಿಯ ಉಲ್ಲಂಘನೆಯಾಗಿದೆ. ಭಾರತದ ಕ್ರಮ ಮುಕ್ತ ಮತ್ತು ನ್ಯಾಯೋಚಿತ ವ್ಯಾಪಾರದ ನೀತಿಗೂ ವಿರುದ್ಧವಾಗಿದೆ ಎಂದು ಕಿಡಿಕಾರಿತ್ತು. ಆದ್ರೀಗ ಭಾರತ ನೆರೆರಾಷ್ಟ್ರ ಚೀನಾಗೆ ನಯವಾಗಿಯೇ ಉತ್ತರ ಕೊಟ್ಟಿದೆ.

-masthmagaa.com

Contact Us for Advertisement

Leave a Reply