ಹೊಸ ಮಾರ್ಗಸೂಚಿ: ರಾಜ್ಯದಲ್ಲಿ ನಾಳೆಯಿಂದ ಏನಿರುತ್ತೆ..? ಏನಿರಲ್ಲ..?

masthmagaa.com:

ದೇಶವ್ಯಾಪಿ ಮೇ 31ರವರೆಗೆ ಲಾಕ್​ಡೌನ್​ ವಿಸ್ತರಣೆಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಸಿಎಂ ಯಡಿಯೂರಪ್ಪ, ಕೆಲವೊಂದು ಕ್ಷೇತ್ರಗಳಿಗೆ ವಿನಾಯಿತಿ ಘೋಷಿಸಿದ್ರು. ಇವೆಲ್ಲವೂ ನಾಳೆಯಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ.

ರಾಜ್ಯದಲ್ಲಿ ಏನಿರುತ್ತೆ..? ಏನಿರಲ್ಲ..? 

– ಕಂಟೈನ್​ಮೆಂಟ್​ ಜೋನ್ ಹೊರತುಪಡಿಸಿ ಬೇರೆಕಡೆ KSRTC, BMTC ಮತ್ತು ಖಾಸಗಿ ಬಸ್ ಸಂಚಾರ. ಆರಂಭದಲ್ಲಿ 200 ಬಸ್​ಗಳ ಸಂಚಾರ.

– ಗರಿಷ್ಠ 30 ಪ್ರಯಾಣಿಕರಿಗೆ ಮಾತ್ರ ಅವಕಾಶ. ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ. ಸಾಮಾಜಿಕ ಅಂತರ ಕಾಪಾಡಬೇಕು.

– ಸದ್ಯಕ್ಕೆ ಟಿಕೆಟ್​ ದರ ಹೆಚ್ಚಳವಿಲ್ಲ. ಸಾರಿಗೆ ನಿಗಮಗಳಿಗೆ ಆಗುವ ನಷ್ಟವನ್ನು ರಾಜ್ಯ ಸರ್ಕಾರವೇ ಭರಿಸಲಿದೆ.

– ಬೆಂಗಳೂರಿನಲ್ಲಿ ಮೆಟ್ರೋ ಸಂಚಾರಕ್ಕೆ ಅನುಮತಿ ಇಲ್ಲ.

– ಆಟೋ, ಟ್ಯಾಕ್ಸಿಗಳ ಸಂಚಾರಕ್ಕೆ ಅವಕಾಶ. ಆದ್ರೆ ಡ್ರೈವರ್ ಬಿಟ್ಟು ಇಬ್ಬರಿಗೆ ಮಾತ್ರ ಅವಕಾಶ.

– ಮ್ಯಾಕ್ಸಿ ಕ್ಯಾಬ್​ಗಳಲ್ಲಿ ಡ್ರೈವರ್​ ಬಿಟ್ಟು ಮೂವರಿಗೆ ಅವಕಾಶ. ಎಲ್ಲರೂ ಮಾಸ್ಕ್​ ಧರಿಸುವುದು ಕಡ್ಡಾಯ.

– ಮಾಲ್, ಸಿನಿಮಾ ಹಾಲ್, ಹೋಟೆಲ್ ಬಿಟ್ಟು ಮತ್ತೆಲ್ಲವೂ ಓಪನ್. ಚಿನ್ನ ಬೆಳ್ಳಿ ಅಂಗಡಿ, ಬಟ್ಟೆ ಅಂಗಡಿ ಕೂಡ ಓಪನ್

– ಹೋಟೆಲ್​ಗಳಲ್ಲಿ ಪಾರ್ಸೆಲ್ ನೀಡಲು ಮಾತ್ರ ಅವಕಾಶ.

– ಸಲೂನ್​ ಓಪನ್, ಬೀದಿಬದಿ ವ್ಯಾಪಾರಕ್ಕೂ ಅವಕಾಶ.

– ಕ್ರೀಡಾಕೂಟಕ್ಕೆ ಅವಕಾಶ. ಆದ್ರೆ ಪ್ರೇಕ್ಷಕರಿಗೆ ಅವಕಾಶವಿಲ್ಲ

– ಜಿಮ್​ ಕೇಂದ್ರಗಳನ್ನು ತೆರೆಯುವಂತಿಲ್ಲ.

– ಅಂತರ್ ಜಿಲ್ಲಾ ರೈಲು ಪ್ರಯಾಣಕ್ಕೆ ಅವಕಾಶ.

– ಹೊರ ರಾಜ್ಯದಿಂದ ಬರುವ ರೈಲು ಮತ್ತು ಬಸ್​ಗಳಿಗೆ ಮೇ 31ರವರೆಗೆ ನಿರ್ಬಂಧ.

– ಮದುವೆ ಸಮಾರಂಭಗಳಲ್ಲಿ ಗರಿಷ್ಠ 50 ಜನರಿಗೆ ಮಾತ್ರ ಅವಕಾಶ. ಸಾಮಾಜಿಕ ಅಂತರ ಕಾಪಾಡಬೇಕು. ಮಾಸ್ಕ್ ಧರಿಸಬೇಕು.

– ಅಂತ್ಯ ಸಂಸ್ಕಾರ ಕಾರ್ಯಕ್ರಮಗಳಲ್ಲಿ ಗರಿಷ್ಠ 20 ಜನ ಮಾತ್ರ ಭಾಗವಹಿಸಬಹುದು.

– ಕಂಟೈನ್​ಮೆಂಟ್​ ಜೋನ್​ಗಳಲ್ಲಿ ಕಟ್ಟುನಿಟ್ಟಿನ ಕ್ರಮ. ಎಲ್ಲಾ ಮನೆಗಳ ಮೇಲೆ ನಿಗಾ. ಓಡಾಟಕ್ಕೆ ನಿರ್ಬಂಧ.

– ಬೆಳಗ್ಗೆ 7ರಿಂದ 9 ಗಂಟೆವರೆಗೆ ಮತ್ತು ಸಂಜೆ 5ರಿಂದ 7 ಗಂಟೆವರೆಗೆ ಪಾರ್ಕ್​ಗಳು ಓಪನ್.

– ಪ್ರತಿ ಭಾನುವಾರ ಸಂಪೂರ್ಣ ಲಾಕ್​ಡೌನ್. ಯಾವುದೇ ವಾಹನ ಓಡಾಟಕ್ಕೆ ಅವಕಾಶವಿಲ್ಲ.

– ಹೊರ ರಾಜ್ಯದಿಂದ ಬರುವವರಿಗಾಗಿ ಹಂತ ಹಂತವಾಗಿ ಬಸ್​ ವ್ಯವಸ್ಥೆ. ತುಂಬಾ ಅಗತ್ಯ ಇದ್ದವರಿಗೆ ಮಾತ್ರ ಅವಕಾಶ. ಆದ್ರೆ ಸರ್ಕಾರಿ ಕ್ವಾರಂಟೈನ್ ಕಡ್ಡಾಯ.

– ಮೇ 31ರವರೆಗೆ ಜನ ಹೇಗೆ ಸಹಕರಿಸುತ್ತಾರೆ ಅನ್ನೋದನ್ನ ಗಮನಿಸಿ ಮುಂದಿನ ತೀರ್ಮಾನ.

-masthmagaa.com

Contact Us for Advertisement

Leave a Reply