ನಿರ್ಮಾಣ ಹಂತದ ನೌಕೆಯಲ್ಲಿ ಕಳ್ಳತನ…ಮಾಲು ಸಹಿತ ಖದೀಮರು ಅಂದರ್

masthmagaa.com:

ದೆಹಲಿ: ಸ್ವದೇಶಿ ಯುದ್ಧವಿಮಾನ ವಾಹಕ ನೌಕೆಯಲ್ಲಿ ಮಹತ್ವದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಳವು ಮಾಡಿದ ಆರೋಪದಡಿ ಬಿಹಾರ ಮತ್ತು ರಾಜಸ್ಥಾನದಲ್ಲಿ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಕಳೆದ ವರ್ಷ ಜೂನ್​​ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಕೊಚ್ಚಿನ್ ಶಿಪ್​ಯಾರ್ಡ್​​ ಲಿಮಿಟೆಡ್​​ನಲ್ಲಿ ಈ ನೌಕೆ ನಿರ್ಮಾಣದ ವೇಳೆ ಕಳ್ಳತನ ನಡೆದಿತ್ತು. ನಂತರದಲ್ಲಿ ಈ ತನಿಖೆಯನ್ನು ಕೇರಳ ಪೊಲೀಸರಿಂದ ರಾಷ್ಟ್ರೀಯ ತನಿಖಾ ದಳ ವಹಿಸಿಕೊಂಡಿತ್ತು. ಹಲವು ರಾಜ್ಯಗಳಲ್ಲಿ ತನಿಖೆ ನಡೆಸಿದ ಎನ್​ಐಎ ಇದೀಗ ಕಳ್ಳತನವಾಗಿದ್ದ 5 ಪ್ರೊಸೆಸರ್, 10 ರ‍್ಯಾಮ್, 5 ಡ್ರೈವ್​​ಗಳನ್ನು ವಶಕ್ಕೆ ಪಡೆದಿದ್ದಾರೆ. ಇವುಗಳಲ್ಲಿ ದೇಶದ ಭದ್ರತೆಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳಿದ್ದವು ಅಂತ ತಿಳಿದು ಬಂದಿದೆ. ಈ ಸಂಬಂಧ 23 ವರ್ಷದ ಸುಮಿತ್ ಕುಮಾರ್ ಸಿಂಗ್ ಮತ್ತು 22 ವರ್ಷದ ದಯಾರಾಮ್ ಎಂಬುವವರನ್ನು ಬಂಧಿಸಲಾಗಿದೆ.

-masthmagaa.com

Contact Us for Advertisement

Leave a Reply