ಐಸಿಸ್​ ಜೊತೆ ನಂಟು: ಉಳ್ಳಾಲ ಮೂಲದ ಮಹಿಳೆ ವಶಕ್ಕೆ!

masthmagaa.com:

ಐಸಿಸ್‌ ಉಗ್ರ ಸಂಘಟನೆಯ ಜೊತೆ ನಂಟಿನ ಶಂಕೆ ಮೇರೆಗೆ ಮಂಗಳೂರು ಸಮೀಪದ ಉಳ್ಳಾಲದ ದೀಪ್ತಿ ಮಾರ್ಲ ಯಾನೆ ಮರಿಯಂ ಎಂಬ ಮಹಿಳೆಯನ್ನ ಎನ್‌ಐಎ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಈಕೆ ಮಾಜಿ ಶಾಸಕ ದಿವಂಗತ ಇದಿನಬ್ಬ ಅವರ ಮೊಮ್ಮಗನ ಪತ್ನಿ. 2021ರ ಆಗಸ್ಟ್‌ 4ರಂದು ಇದಿನಬ್ಬರ ಮೊಮ್ಮಗ ಅಬ್ದುಲ್‌ ರೆಹಮಾನ್‌ ಅನ್ನ ಎನ್‌ಐಎ ಅಧಿಕಾರಿಗಳು ಅರೆಸ್ಟ್ ಮಾಡಿದ್ರು. ಆಗ ಇದಿನಬ್ಬ ಅವರ ಮತ್ತೊಬ್ಬ ಮೊಮ್ಮಗ ಅನಾಸ್​ನ ಪತ್ನಿ ದೀಪ್ತಿ ಯಾನೆ ಮರಿಯಂ ಮೇಲೂ ಅನುಮಾನ ಬಂದಿತ್ತು. ಈಗ ಆಕೆ ಅರೆಸ್ಟ್ ಆಗಿದ್ದಾಳೆ.

-masthmagaa.com

Contact Us for Advertisement

Leave a Reply