ಕೊರೋನಾ ಲಸಿಕೆ ಕಂಡು ಹಿಡಿಯೋ ಗ್ಯಾರಂಟಿ ಇಲ್ಲ: WHO ಎಕ್ಸ್​ಪರ್ಟ್​

masthmagaa.com:

ಲಂಡನ್​​: ಭವಿಷ್ಯದಲ್ಲಿ ಕೊರೋನಾ ವೈರಸ್ ಹಾವಳಿಯ ಜೊತೆಗೇ ಬದುಕಬೇಕಾಗುತ್ತೆ.. ಕೊರೋನಾಗೆ ಲಸಿಕೆ ಕಂಡು ಹಿಡಿಯೋ ಯಾವುದೇ ಗ್ಯಾರಂಟಿ ಇಲ್ಲ ಅಂತ ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್​​-19ನ ವಕ್ತಾರ ಡೇವಿಡ್ ನಬಾರೋ ಹೇಳಿದ್ದಾರೆ. ಲಂಡನ್​ನ ಇಂಪೀರಿಯಲ್ ಕಾಲೇಜಿನಲ್ಲಿ ಗ್ಲೋಬಲ್ ಹೆಲ್ತ್​​​ ಪ್ರೊಫೆಸರ್ ಆಗಿರುವ ಇವರು, ದಿ ಗಾರ್ಡಿಯನ್​​​​​​​ಗೆ ಈ ಮಾಹಿತಿ ನೀಡಿದ್ದಾರೆ.

ಮಾನವರು ಹೊಸ ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಕೊರೋನಾ ವೈರಸ್​​ಗೆ ಶೀಘ್ರದಲ್ಲೇ ಲಸಿಕೆ ಕಂಡು ಹಿಡಿಯಲಾಗುತ್ತೆ ಎಂದು ಭಾವಿಸಬಾರದು. ಪ್ರತಿಯೊಂದು ವೈರಸ್​​​ ವಿರುದ್ಧ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ ಕಂಡು ಹಿಡಿಯಲು ಆಗೋದಿಲ್ಲ. ಕೆಲವು ವೈರಸ್​​ಗಳಿಗೆ ಲಸಿಕೆ ತಯಾರಿಸೋದು ತುಂಬಾ ಕಷ್ಟ.. ಹೀಗಾಗಿ ಇಂತಹ ವೈರಸ್​​ಗಳ ನಡುವೆಯೇ ನಮ್ಮ ಜೀವನ ನಡೆಸಲು ಹೊಸ ಮಾರ್ಗ ಹುಡುಕಬೇಕು ಎಂದು ಹೇಳಿದ್ದಾರೆ.

ಹೊಸ ಮಾರ್ಗ ಅಂದ್ರೆ, ಯಾರಿಗೆ ಕೊರೋನಾ ಲಕ್ಷಣ ಬರುತ್ತೋ ಅವರನ್ನು ಕೂಡಲೇ ಐಸೋಲೇಷನ್​ನಲ್ಲಿ ಇರಿಸಬೇಕು. ಅವರ ಜೊತೆ ಸಂಪರ್ಕಕ್ಕೆ ಬಂದವರನ್ನೂ ಐಸೋಲೇಷನ್​ನಲ್ಲಿ ಇರಿಸಬೇಕು.. ವೃದ್ಧರನ್ನು ಈ ಸೋಂಕಿಗೆ ತುತ್ತಾಗದಂತೆ ನೋಡಿಕೊಳ್ಳಬೇಕು.. ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply