ತಿನ್ನಲು ಅನ್ನ ಇಲ್ಲದ್ದಕ್ಕೆ ಕಾಳಿಂಗ ಸರ್ಪವನ್ನೇ ಬೇಟೆಯಾಡಿದ್ರು..!

masthmagaa.com:

ದೇಶದಲ್ಲಿ ಲಾಕ್​ಡೌನ್​ ಹೇರಿರೋದ್ರಿಂದ ಜನ ಹಲವು ತೊಂದರೆಗಳನ್ನ ಅನುಭವಿಸುತ್ತಿದ್ದಾರೆ. ಅಗತ್ಯ ವಸ್ತುಗಳು ಲಭ್ಯವಿದ್ದರೂ ಕೆಲಸವಿಲ್ಲದೆ ಕೈಯಲ್ಲಿ ಕಾಸಿಲ್ಲ. ಇದರ ನಡುವೆಯೇ ತಿನ್ನಲು ಅನ್ನವಿಲ್ಲದ ಕಾರಣ ಕಾಳಿಂಗ ಸರ್ಪವನ್ನೇ ಬೇಟೆಯಾಡಿದ ಶಾಕಿಂಗ್ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಮೂವರು ಬೇಟೆಗಾರರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನ ತಮ್ಮ ಹೆಗಲ ಮೇಲೆ ಹಾಕಿಕೊಂಡು ಪೋಸ್ ಕೊಟ್ಟಿದ್ದಾರೆ. ಅಲ್ಲದೆ ತಾವೇ ಅದನ್ನ ಬೇಟೆಯಾಡಿದ್ದು ಅಂತಾನೂ ಒಪ್ಪಿಕೊಂಡಿದ್ದಾರೆ. ಇದರಲ್ಲಿ ಒಬ್ಬ ವ್ಯಕ್ತಿ ಲಾಕ್​ಡೌನ್​ನಿಂದಾಗಿ ಮನೆಯಲ್ಲಿ ತಿನ್ನಲು ಅನ್ನವಿಲ್ಲ. ಹೀಗಾಗಿ ಏನಾದ್ರು ಸಿಗಬಹುದು ಅಂತ ಕಾಡಿಗೆ ಹೋದೆವು. ಅಲ್ಲಿ ಕಾಳಿಂಗ ಸರ್ಪ ಸಿಕ್ಕಿತು ಅಂತ ಹೇಳಿದ್ದಾನೆ.

ಭಾರತದಲ್ಲಿ ಕಾಳಿಂಗ ಸರ್ಪವು ಸಂರಕ್ಷಿತ ಸರೀಸೃಪವಾಗಿದೆ. ಅದನ್ನ ಬೇಟೆಯಾಡುವುದು ಜಾಮೀನು ರಹಿತ ಅಪರಾಧ. ಹೀಗಾಗಿ ಮೂವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಆದ್ರೆ ಮೂವರು ಕೂಡ ತಲೆ ಮರೆಸಿಕೊಂಡಿದ್ದಾರೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply