ಟ್ರಯಲ್​ ರೂಂನಲ್ಲಿದ್ದ ಮಹಿಳೆಯನ್ನು ಇಣುಕಿ ನೋಡಿದ ಯುವಕ ಅಂದರ್..!

masthmagaa.com:

ನೋಯ್ಡಾ: ಮಾಲ್ ಒಂದರಲ್ಲಿ ಮಹಿಳೆಯೊಬ್ಬರು ಟ್ರಯಲ್ ರೂಂನಲ್ಲಿದ್ದಾಗ ವ್ಯಕ್ತಿಯೊಬ್ಬ ಇಣುಕಿ ನೋಡಿದ್ದಾನೆ. ನೋಯ್ಡಾದ ಶಾಪಿಂಗ್ ಮಾಲ್ ಒಂದರಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ನೋಯ್ಡಾದ ಸೆಕ್ಟರ್ 32ನಲ್ಲಿರೋ ಮಾಲ್ ಒಂದಕ್ಕೆ ದಂಪತಿ ಭೇಟಿ ನೀಡಿದ್ದರು. ಈ ವೇಳೆ ಮಹಿಳೆ ಡ್ರೆಸ್​ ಒಂದನ್ನು ತೆಗೆದುಕೊಂಡು ಟ್ರಯಲ್ ನೋಡಲು ತೆರಳಿದ್ದರು. ಈ ವೇಳೆ ಟ್ರಯಲ್ ರೂಂ ಹೊರಗಿನಿಂದ ಯಾರೋ ಇಣುಕುತ್ತಿರೋದು ಮಹಿಳೆಯ ಗಮನಕ್ಕೆ ಬಂದಿದೆ. ತಕ್ಷಣ ಅವರು ಬಾಗಿಲು ತೆಗೆದು ನೋಡಿದಾಗ ಅಲ್ಲಿ ಮಾಲ್​​ನ ಹೌಸ್​ ಕೀಪಿಂಗ್ ಯುವಕನೊಬ್ಬ ನಿಂತುಕೊಂಡಿದ್ದ. ಮಹಿಳೆ ತಕ್ಷಣ ಈ ಬಗ್ಗೆ ತಮ್ಮ ಪತಿ ಮತ್ತು ಮಾಲ್​ನ ಸಿಬ್ಬಂದಿಗೆ ತಿಳಿಸಿದ್ದಾರೆ.

ನಂತರ ಮಾಲ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಪೊಲೀಸರು 21 ವರ್ಷದ ಯುವಕನನ್ನು ಅರೆಸ್ಟ್ ಮಾಡಿದ್ದಾರೆ. ಸದ್ಯ ಯುವಕನನ್ನು ಕೋರ್ಟ್​ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

masthmagaa.com:

Contact Us for Advertisement

Leave a Reply