masthmagaa.com:

ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಸಂಪೂರ್ಣವಾಗಿ ಆರಂಭವಾಗದಿದ್ದರೂ, ವಂದೇ ಭಾರತ್ ಮಿಷನ್ ಮತ್ತು ‘ಏರ್ ಬಬಲ್’ ವ್ಯವಸ್ಥೆ ಅಡಿಯಲ್ಲಿ ಕೆಲವೊಂದು ವಿಮಾನಗಳು ವಿದೇಶದಿಂದ ಭಾರತಕ್ಕೆ ಬರುತ್ತಿವೆ. ಅಲ್ಲದೆ ರಾಜ್ಯ ರಾಜ್ಯಗಳ ನಡುವೆ ದೇಶೀ ವಿಮಾನ ಸಂಚಾರ ಸಂಪೂರ್ಣವಾಗಿ ಮುಕ್ತವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೊರೋನಾ ನಿಯಮಗಳನ್ನ ಪಾಲಿಸಬೇಕು.

ಆದ್ರೆ ವಿಮಾನದಲ್ಲಿ ಪ್ರಯಾಣಿಸುವಾಗ ಅಥವಾ ಏರ್​ಪೋರ್ಟ್​ಗಳಲ್ಲಿ ಕೆಲವರು ಮಾಸ್ಕ್​ ಧರಿಸಲ್ಲ. ಜೊತೆಗೆ ಕೊರೋನಾ ನಿಯಮಗಳನ್ನ ಪಾಲಿಸುವುದಿಲ್ಲ. ಇಂತಹ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಲು ಡೈರಕ್ಟರೇಟ್​ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಮುಂದಾಗಿದೆ. ವಿಮಾನಯಾನದ ವೇಳೆ ಪ್ರಯಾಣಿಕರು ಮಾಸ್ಕ್​ ಧರಿಸದಿದ್ದರೆ ಮತ್ತು ಕೊರೋನಾ ನಿಯಮಗಳನ್ನ ಉಲ್ಲಂಘಿಸಿದ್ರೆ ಅಂತಹವರನ್ನು ‘ನೋ ಫ್ಲೈ ಲಿಸ್ಟ್​’ಗೆ ಹಾಕುವಂತೆ ಏರ್​ಲೈನ್ಸ್​ ಕಂಪನಿಗಳಿಗೆ ಸೂಚಿಸಿದೆ.

‘ನೋ ಫ್ಲೈ ಲಿಸ್ಟ್’ ಅನ್ನೋದು ವಿಮಾನಯಾನಕ್ಕೆ ಅಡ್ಡಿಪಡಿಸುವ ಪ್ರಯಾಣಿಕರನ್ನು ಗುರುತಿಸುವ ಪಟ್ಟಿಯಾಗಿದೆ. ಈ ಪಟ್ಟಿಯಲ್ಲಿ ಹೆಸರು ಇರುವವರಿಗೆ ವಿಮಾನ ಹತ್ತದಂತೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗುತ್ತದೆ. ‘ನೋ ಫ್ಲೈ ಲಿಸ್ಟ್​’ ಅನ್ನು ಡಿಜಿಸಿಎ ನಿರ್ವಹಿಸುತ್ತದೆ.

ಇನ್ನು ದೇಶೀ ವಿಮಾನಗಳಲ್ಲಿ ಮೊದಲೇ ಪ್ಯಾಕ್ ಮಾಡಿದ ತಿಂಡಿ, ಊಟ ಮತ್ತು ಪಾನೀಯಗಳನ್ನು ನೀಡಲು ವಿಮಾನಯಾನ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಸಚಿವಾಲಯ ಅನುಮತಿ ನೀಡಿದೆ. ಜೊತೆಗೆ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಬಿಸಿ ಊಟ ಮತ್ತು ಸೀಮಿತ ಪಾನೀಯಗಳನ್ನ ಪೂರೈಸಲು ಕೂಡ ಅನುಮತಿ ನೀಡಲಾಗಿದೆ.

-masthmagaa.com

Contact Us for Advertisement

Leave a Reply