ದೇಶದಲ್ಲಿ 110 ಜನರಿಗೆ ಕೊರೋನಾ.. ಉತ್ತರಾಖಂಡ್​ಗೂ ಕಾಲಿಟ್ಟ ವೈರಸ್​..!

masthmagaa.com:

ದೇಶದಲ್ಲಿ ಕೊರೋನಾ ವೈರಸ್​ ದೃಢಪಟ್ಟ ಪ್ರಕರಣಗಳ ಸಂಖ್ಯೆ 110ಕ್ಕೆ ಏರಿಕೆಯಾಗಿದೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಉತ್ತರಾಖಂಡ್​ನಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿದ್ದು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ತಲಾ ಒಂದೊಂದು ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.

ದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳು ದೃಢಪಟ್ಟಿರೋದು ಮಹಾರಾಷ್ಟ್ರದಲ್ಲಿ. ಇಲ್ಲಿ 32 ಜನರಲ್ಲಿ ಸೋಂಕು ದೃಢಪಟ್ಟರೆ, ಕೇರಳದಲ್ಲಿ 22, ಹರಿಯಾಣದಲ್ಲಿ 14, ಉತ್ತರಪ್ರದೇಶದಲ್ಲಿ 12, ದೆಹಲಿಯಲ್ಲಿ 7 ಹಾಗೂ ಕರ್ನಾಟಕದಲ್ಲಿ 6 ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಕರ್ನಾಟಕ ಹಾಗೂ ದೆಹಲಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply