ಒಮೈಕ್ರಾನ್ ದಾಂಧಲೆ ಶುರು : ಬೆಂಗಳೂರಿಗೂ ಬಂತು ಆಫ್ರಿಕನ್ ವೈರಾಸುರ!

masthmagaa.com:

ಯಾವುದು ಆಗ್ಬಾರ್ದು ಅಂದುಕೊಂಡಿದ್ವೋ ಅದು ಆಗಿದೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಆತಂಕ ಸೃಷ್ಟಿಸಿರೋ ಒಮೈಕ್ರಾನ್​ ರೂಪಾಂತರಿ ಭಾರತಕ್ಕೂ ಬಂದಿದೆ. ಅದು ಕೂಡ ಕರ್ನಾಟಕದಲ್ಲಿ. ರಾಜ್ಯದಲ್ಲಿ ಇಬ್ಬರಿಗೆ ಒಮೈಕ್ರಾನ್​ ರೂಪಾಂತರಿ ಕೊರೋನಾ ವೈರಸ್​​ ದೃಢಪಟ್ಟಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಎರಡೂ ಕೇಸ್​ ಕೂಡ ಬೆಂಗಳೂರಿನದ್ದು ಅಂತ ಬಿಬಿಎಂಪಿ ಆಯುಕ್ತರಾದ ಗೌರವ್​ ಗುಪ್ತಾ ಹೇಳಿದ್ದಾರೆ. ಜೊತೆಗೆ ಎರಡು ಕೇಸ್​ ಯಾವ್ದು ಅಂತ ಡಿಟೇಲಾಗಿ ಮಾಹಿತಿ ನೀಡಿದ್ದಾರೆ. ಹಾಗಿದ್ರೆ ರಾಜ್ಯಕ್ಕೆ ಒಮೈಕ್ರಾನ್​ ಹೇಗೆ ಬಂತು, ಯಾರಿಗೆ ಬಂತು, ಯಾವಾಗ ಬಂತು, ಅವರು ಯಾವ ದೇಶದವರು, ಲಸಿಕೆ ಹಾಕ್ಕೊಂಡಿದ್ರಾ, ಅವರಿಂದ ಇನ್ನೆಷ್ಟು ಜನರಿಗೆ ಕೊರೋನಾ ಬಂದಿದೆ ಅಂತ ನೋಡ್ತಾ ಹೋಗಣ..

ಮೊದಲ ಕೇಸ್​
ದಕ್ಷಿಣ ಆಫ್ರಿಕಾ ಪ್ರಜೆ
66 ವರ್ಷ ವಯಸ್ಸು
ನ.​ 20ಕ್ಕೆ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಲ್ಯಾಂಡ್​
ಏರ್​ಪೋರ್ಟ್​ನಲ್ಲಿ ಕೊರೋನಾ ಪರೀಕ್ಷೆ
ಪರೀಕ್ಷೆಯಲ್ಲಿ ಪಾಸಿಟಿವ್​
ಹೋಟೆಲ್​​ನಲ್ಲಿ ವ್ಯಕ್ತಿ ಐಸೋಲೇಷನ್​​
ಸ್ಯಾಂಪಲ್ ಜಿನೋಮ್ ಸೀಕ್ವೆನ್ಸಿಂಗ್​​ಗೆ​ ರವಾನೆ
ಜಿನೋಮ್ ಸೀಕ್ವೆನ್ಸಿಂಗ್​​ ವೇಳೆ ಒಮೈಕ್ರಾನ್​ ದೃಢ
ವ್ಯಕ್ತಿಯ ಸಂಪರ್ಕಕ್ಕೆ ಬಂದ 24 ಪ್ರೈಮರಿ ಕಾಂಟ್ಯಾಕ್ಟ್ಸ್
240 ಸೆಕೆಂಡರಿ ಕಾಂಟ್ಯಾಕ್ಟ್​ಗಳನ್ನ ಪತ್ತೆಹಚ್ಚಲಾಗಿದೆ
ಎಲ್ಲರಿಗೂ ಕೊರೋನಾ ಪರೀಕ್ಷೆ, ಎಲ್ಲರದ್ದು ನೆಗೆಟಿವ್​
ಆದ್ರೂ ಪ್ರೈಮರಿ, ಸಕೆಂಡರಿ ಕಾಂಟ್ಯಾಕ್ಟ್​ಗಳ ಮೇಲೆ ನಿಗಾ
ಖಾಸಗಿ ಲ್ಯಾಬ್​ನಲ್ಲಿ ಪರೀಕ್ಷೆ ಮಾಡಿಸಿದ್ದ ಸೋಂಕಿತ ವ್ಯಕ್ತಿ
ಅದರಲ್ಲಿ ಕೊರೋನಾ ನೆಗೆಟಿವ್​ ಬಂದ ಹಿನ್ನೆಲೆ
ನ. 22ರಂದು ಏರ್​ಪೋರ್ಟ್ ಮೂಲಕ ದುಬೈಗೆ ಹಾರಾಟ
ಕೊರೋನಾ ಲಸಿಕೆ ಹಾಕಿಸಿಕೊಂಡಿದ್ರೂ ಒಮೈಕ್ರಾನ್ ದೃಢ

ಎರಡನೇ ಕೇಸ್​
ಭಾರತದ ಪ್ರಜೆ
46 ವರ್ಷ ವಯಸ್ಸು
ಬೆಂಗಳೂರಿನ ವೈದ್ಯ
ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ
ನ. 22ನೇ ತಾರೀಖು ಸ್ಯಾಂಪಲ್​ ಕಲೆಕ್ಟ್
ಕೊರೋನಾ ಪರೀಕ್ಷೆಯಲ್ಲಿ ಪಾಸಿಟಿವ್​
ಸ್ಯಾಂಪಲ್ ಜಿನೋಮ್ ಸೀಕ್ವೆನ್ಸಿಂಗ್​​ಗೆ​ ರವಾನೆ
ಜಿನೋಮ್ ಸೀಕ್ವೆನ್ಸಿಂಗ್​​ ವೇಳೆ ಒಮೈಕ್ರಾನ್​ ದೃಢ
ಆರಂಭದಲ್ಲಿ ಹೋಂ ಐಸೋಲೇಷನ್​​
ನಂತ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ
ವ್ಯಕ್ತಿಯ ಆರೋಗ್ಯ ಸ್ಥಿರ, ಏನೂ ಸಮಸ್ಯೆ ಇಲ್ಲ
ವ್ಯಕ್ತಿಯ ಸಂಪರ್ಕಕ್ಕೆ ಬಂದ 13 ಪ್ರೈಮರಿ ಕಾಂಟ್ಯಾಕ್ಟ್ಸ್
205 ಸೆಕೆಂಡರಿ ಕಾಂಟಾಕ್ಟ್​ಗಳನ್ನ ಪತ್ತೆಹಚ್ಚಲಾಗಿದೆ
ಎಲ್ಲರಿಗೂ ಕೊರೋನಾ ಪರೀಕ್ಷೆ, ಐವರಿಗೆ ಪಾಸಿಟಿವ್​
ಪ್ರೈಮರಿ ಕಾಂಟ್ಯಾಕ್ಟ್ಸ್​​ ಮೂವರಿಗೆ ಪಾಸಿಟಿವ್​
ಸೆಕೆಂಡರಿ ಕಾಂಟ್ಯಾಕ್ಟ್ಸ್​ನ ಇಬ್ಬರಿಗೆ ಪಾಸಿಟಿವ್
ಐವರು ಕೂಡ ಐಸೋಲೇಷನ್​ನಲ್ಲಿ
ಇವರ ಸ್ಯಾಂಪಲ್ಸ್ ಜಿನೋಮ್ ಸೀಕ್ವೆನ್ಸಿಂಗ್​​ಗೆ​ ರವಾನೆ
ವೈದ್ಯ ಲಸಿಕೆ ಹಾಕಿಸಿಕೊಂಡಿದ್ರೂ ಒಮೈಕ್ರಾನ್ ದೃಢ

ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ಇಬ್ಬರಿಗೂ ಎರಡೂ ಡೋಸ್​ ಕೊರೋನಾ ಲಸಿಕೆ ಹಾಕಲಾಗಿತ್ತು. ಹೀಗಾಗಿ ಒಮೈಕ್ರಾನ್​ ರೂಪಾಂತರಿ ವಿರುದ್ಧ ಲಸಿಕೆ ಕೆಲಸ ಮಾಡಲ್ವಾ ಅನ್ನೋ ಅನುಮಾನ ಮೂಡಿದೆ. ಮತ್ತೊಂದು ವಿಚಾರ ಅಂದ್ರೆ, ಎರಡನೇ ಕೇಸ್​ ಬೆಂಗಳೂರಿನದ್ದು. ಈತ ಯಾವ ದೇಶಕ್ಕೂ ಹೋಗಿ ಬಂದಿಲ್ಲ. ಆದ್ರೂ ಒಮೈಕ್ರಾನ್​ ದೃಢಪಟ್ಟಿದೆ. ಹೀಗಾಗಿ ಈತನಂತೆ ಬೇರೆಯವರಿಗೂ ಒಮೈಕ್ರಾನ್​ ತಗುಲಿರುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರೂ ಮಾಸ್ಕ್​ ಹಾಕಿ, ಮುಂಜಾಗ್ರತೆ ವಹಿಸಿ ಅಂತ ಬಿಬಿಎಂಪಿ ಆಯುಕ್ತ ಗೌರವ್​ ಗುಪ್ತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply